ಇಂದೋರ್(ಡಿ. 11) ಪೊಲೀಸ್ ಠಾಣೆಯ ಮುಂದೆ ಹೈಡ್ರಾಮಾ ನಡೆದಿತ್ತು. ಕಂಠಪೂರ್ತಿ ಕುಡಿದಿದ್ದ ಯೋಧನೊಬ್ಬ ಪೊಲೀಸರನ್ನು, ಎಸ್‌ಪಿಯನ್ನು, ಐಜಿಯನ್ನು ಬಾಯಿಗೆ ಬಂದಂತೆ ಬಯ್ಯುತ್ತಿದ್ದ.

ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಯೋಧನನ್ನು ಬಂಧಿಸಿ ಕರೆತರಲಾಗಿತ್ತು. ಪೊಲೀಸ್ ಜೀಪ್ ನಲ್ಲಿಯೇ ಕುಳಿತಿದ್ದ ವ್ಯಕ್ತಿ ಹೈಡ್ರಾಮಾ ಸೃಷ್ಟಿ ಮಾಡಿದ್ದ. ಈತನ ವಿರುದ್ಧ ದೂರು ಕೊಟ್ಟ ಯುವತಿಯ ಅಣ್ಣ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಇದೀಗ ಪೊಲೀಸರು  ಹಿಗ್ಗಾ ಮುಗ್ಗಾ ಥಳಿಸಿದ್ದಾರೆ ಎಂದು ಕೂಗಾಡುತ್ತಿದ್ದ. ಆತನ ತಲೆಯಿಂದ ರಕ್ತ ಸುರಿಯುತ್ತಿತ್ತು.

ನಂಬಿಸಿ ಗರ್ಭಪಾತ ಮಾಡಿಸಿದ್ದ ಪಿಎಸ್‌ಐ

ಮಧ್ಯಪ್ರದೇಶದ ವಿಜಯ್ ನಗರ  ಠಾಣೆ ಎದುರು ಘಟನೆ ನಡೆಯುತ್ತಿದ್ದು ಏನಾಗುತ್ತಿದೆ ಎಂಬುದು ಯಾರಿಗೂ ಒಂದು ಕ್ಷಣ ಅರ್ಥವಾಗುವ ಸ್ಥಿತಿಯಲ್ಲಿ ಇರಲಿಲ್ಲ.

ಕಂಠಪೂರ್ತಿ ಕುಡಿದ ಸೈನಿಕ ಮಧ್ಯರಾತ್ರಿ ಮನೆಗೆ ಬಂದಿದ್ದಾನೆ. ತಾನು ವಾಸವಿದ್ದ  ಬಿಲ್ಡಿಂಗ್ ಮೊದಲನೆ ಮಹಡಿಯಲ್ಲಿದ್ದ ಯುವತಿಯೊಂದಿಗೆ ವಾದಕ್ಕೆ ಇಳಿದಿದ್ದಾನೆ. ಈ ವೇಳೆ ಯುವತಿ ಸಹಾಯಕ್ಕಾಗಿ ತನ್ನ ಅಣ್ಣನನ್ನು ಕರೆದಿದ್ದಾಳೆ.  ಅಲ್ಲಿಂದ ಪೊಲೀಸರಿಗೆ ಕರೆ ಮಾಡಲಾಗಿದೆ.

ಯುನಿಫಾರ್ಮ್ ನಲ್ಲಿಯೇ ಇದ್ದ ಸೈನಿಕನನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಾಗ ಠಾಣೆ  ಒಳಗೆ ಐಜಿ ಯೋಗೇಶ್ ದೇಶ್‌ಮುಖ್ , ಎಎಸ್‌ಪಿ ವಿಜಯ್ ಖತ್ರಿ ಇದ್ದರು.  ಗಲಾಟೆ ಕೇಳಿ ಹೊರಬಂದ ಅಧಿಕಾರಿಗಳು ರವಿಯನ್ನು  ವೈದ್ಯಕೀಯ ತಪಾಸಣೆಗೆ ಕಳಿಸಿದ್ದಾರೆ.

ಸುದ್ದಿ ತಿಳಿದು ಮಾಧ್ಯಮಗಳೂ ದೌಡಾಯಿಸಿವೆ. ಒಟ್ಟಿನಲ್ಲಿ ಪೊಲೀಸ್ ಠಾಣೆ ಮುಂದೆ ನಡೆದ ಹೈಡ್ರಾಮಾ ಒಂದು ಹಂತದಲ್ಲಿ ಏನಾಗುತ್ತಿದೆ ಎಂಬ ಗೊಂದಲವನ್ನು ನಿರ್ಮಾಣ ಮಾಡಿತ್ತು.