ಮೋದಿ ಬಂದ ಮೇಲೆ ಆದ ದೊಡ್ಡ ಬದಲಾವಣೆಯೊಂದನ್ನು ಹೇಳಿದ ಯೋಗಿ
ಮೋದಿ ನಾಯಕತ್ವದಲ್ಲಿ ಬದಲಾದ ಭಾರತ/ ಮುಂದುವರಿದ ರಾಷ್ಟ್ರಗಳೆ ಭಾರತವನ್ನು ಬೆರಗು ಕಣ್ಣಿನಿಂದ ನೋಡುತ್ತಿವೆ/ ಮೋದಿ ನಾಯಕತ್ವದಲ್ಲಿ ಮನೆ ಮನೆಗೆ ತಂತ್ರಜ್ಞಾನ/
ಗೋರಖ್‌ಪುರ(ಡಿ. 11) ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಭಾರತವನ್ನು ನೋಡುತ್ತಿದ್ದ ವಿಶ್ವದ ದೃಷ್ಟಿಕೋನವೇ ಬದಲಾಗಿದ್ದು ಮತ್ತೊಮ್ಮೆ ಭಾರತ ಏನು ಮಾಡುತ್ತದೆ ಎಂಬುದನ್ನು ಎಲ್ಲರೂ ನೋಡುತ್ತಿದ್ದಾರೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಮಹಾರಾಣಾ ಪ್ರತಾಪ್ ಶಿಕ್ಷಾ ಪರಿಷತ್ ಸಂಸ್ಥಾಪನಾ ಸಪ್ತಾಹದಲ್ಲಿ ಮಾತನಾಡಿದ ಯೋಗಿ, ಕೊರೊನಾ ವೈರಸ್ ಗೆ ಲಸಿಕೆ ಮುಂದಿನ ವರ್ಷದ ಜನವರಿಯಲ್ಲಿ ಸಿದ್ಧವಾಗಲಿದೆ. ನಾಗರಿಕರು ಸರ್ಕಾರದ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸಬೇಕು ಎಂದರು.
ಲವ್ ಜಿಹಾದ್ ವಿರುದ್ಧ ಎಂಥ ಕಾನೂನು ತಂದ ಯೋಗಿ ಸರ್ಕಾರ
ಆರೇಳು ವರ್ಷ ಹಿಂದಕ್ಕೆ ಹೋದರೆ ಭಾರತ ವಿಶ್ವದ ಉಳಿದ ರಾಷ್ಟ್ರಗಳನ್ನು ನೋಡುತ್ತಿತ್ತು. ಆದರೆ ಮೋದಿ ನಾಯಕತ್ವದ ನಂತರ ಯುರೋಪ್, ಅಮೇರಿಕಾ ಭಾರತ ಏನು ಮಾಡುತ್ತಿದೆ ಎಂಬುದನ್ನು ನೋಡುತ್ತಿವೆ ಎಂದರು.
ಭಾರತದಲ್ಲಿನ ಚಿಕ್ಕ ಮಗುವಿಗೂ ತಂತ್ರಜ್ಞಾನ ಲಭ್ಯವಾಗುತ್ತದೆ. ಮಗು ಆನ್ ಲೈನ್ ಕ್ಲಾಸ್ ಅಟೆಂಡ್ ಮಾಡುವ ಪರಿಸ್ಥಿತಿಗೆ ಬಂದು ತಲುಪಿದ್ದೇವೆ. ತಂತ್ರಜ್ಞಾನದ ನೆರವಿನಿಂದಲೇ 135 ಕೋಟಿ ಜನಸಂಖ್ಯೆಯ ದೊಡ್ಡ ರಾಷ್ಟ್ರ ಕೊರೊನಾದಂತಹ ಮಹಾಮಾರಿ ವಿರುದ್ಧ ಹೊರಾಟ ಮಾಡಲು ಸಾಧ್ಯವಾಗಿದೆ ಎಂದರು.