ಇನ್ಮುಂದೆ ರೈಲು ನಿಲ್ದಾಣದಲ್ಲಿ ಸಿಗಲಿದೆ ಸ್ಯಾನಿಟರಿ ಪ್ಯಾಡ್, ಕಾಂಡೋಮ್

Sanitary pads, condoms to be sold at railway stations
Highlights

ಕ್ರಾಂತಿಕಾರಿ ಯೋಜನೆಗಳ ಮೂಲಕವೇ ಎಲ್ಲರ ಗಮನ ಸೆಳೆದಿರುವ  ಭಾರತೀಯ ರೈಲ್ವೆ ಮತ್ತೊಂದು ಐತಿಹಾಸಿಕ ನಿರ್ಧಾರ ಕೈಗೊಂಡಿದೆ. ಹೊಸ ಶೌಚಾಲಯ ನೀತಿ ಜಾರಿಗೆ ತಂದಿರುವ ಇಲಾಖೆ, ದೇಶದ ಎಲ್ಲ ರೈಲು ನಿಲ್ದಾಣಗಳಲ್ಲಿ ಕಡಿಮೆ ಬೆಲೆಯ ಸ್ಯಾನಿಟರಿ ಪ್ಯಾಡ್ ಮತ್ತು ಕಾಂಡೋಮ್ ಗಳ ಪೂರೈಕೆಗೆ ಒಪ್ಪಿಗೆ ನೀಡಿದೆ.

ಬೆಂಗಳೂರು(ಮೇ.26): ಕ್ರಾಂತಿಕಾರಿ ಯೋಜನೆಗಳ ಮೂಲಕವೇ ಎಲ್ಲರ ಗಮನ ಸೆಳೆದಿರುವ  ಭಾರತೀಯ ರೈಲ್ವೆ ಮತ್ತೊಂದು ಐತಿಹಾಸಿಕ ನಿರ್ಧಾರ ಕೈಗೊಂಡಿದೆ. ಹೊಸ ಶೌಚಾಲಯ ನೀತಿ ಜಾರಿಗೆ ತಂದಿರುವ ಇಲಾಖೆ, ದೇಶದ ಎಲ್ಲ ರೈಲು ನಿಲ್ದಾಣಗಳಲ್ಲಿ ಕಡಿಮೆ ಬೆಲೆಯ ಸ್ಯಾನಿಟರಿ ಪ್ಯಾಡ್ ಮತ್ತು ಕಾಂಡೋಮ್ ಗಳ ಪೂರೈಕೆಗೆ ಒಪ್ಪಿಗೆ ನೀಡಿದೆ.

ದೇಶದ ಎಲ್ಲ ರೈಲು ನಿಲ್ದಾಣಗಳಲ್ಲಿ ಮಹಿಳೆ ಮತ್ತು ಪುರುಷರಿಗೆ ಹಾಗೂ ವಿಕಲ ಚೇತನರಿಗೆ ಪ್ರತ್ಯೇಕ ಶೌಚಾಲಯ ನಿರ್ಮಾಣ ಕಾರ್ಯಕ್ಕೂ ಇಲಾಖೆ ಮುಂದಾಗಿದೆ. ವಿಶೇಷವಾಗಿ ಮಹಿಳೆಯರಿಗೆಗಾಗಿ ಕಡಿಮೆ ಬೆಲೆಯ ಸ್ಯಾನಿಟರಿ ಪ್ಯಾಡ್ ಪೂರೈಕೆಗೂ ಸೈ ಎಂದಿದೆ. ನಿಲ್ದಾಣದ ಒಳಗೂ ಮತ್ತು ಹೊರಗೂ ಒಂದೊಂದು ಶೌಚಾಲಯ ನಿರ್ಮಿಸುವ ಯೋಜನೆ ಸಿದ್ದಗೊಂಡಿದ್ದು, ಇದರಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಸ್ಯಾನಿಟರಿ ಪ್ಯಾಡ್ ಮತ್ತು ಕಾಂಡೋಮ್ ಪುರೈಸಲಾಗುವುದು.

ಕೇವಲ ಪ್ರಯಾಣಿಕರಷ್ಟೇ ಅಲ್ಲದೇ ರೈಲು ನಿಲ್ದಾಣದ ಸುತ್ತಮುತ್ತ ವಾಸಿಸುವ ಜನರೂ ಕೂಡ ಈ ಶೌಚಾಲಯ ಉಪಯೋಗ ಮಾಡಬಹುದಾಗಿದೆ. ಇನ್ನು ಶೌಚಾಲಯದ ನಿರ್ವಹಣೆಗಾಗಿ ಖಾಸಗಿ ಎನ್ ಜಿಓ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

loader