ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ದೇಶದ ಮಾಧ್ಯಮಗಳ ವಿರುದ್ಧ ಇಂದು ಹರಿಹಾಯ್ದಿದ್ದಾರೆ. ಮಾಧ್ಯಮಗಳು ಕತಾರ್ ನಲ್ಲಿ ನಡೆಯುತ್ತಿರುವ ಸೆಮಿ ಫೈನಲ್ ಗೆ ಪ್ರವೇಶಿಸಿರುವುದನ್ನು ಫೋಕಸ್ ಮಾಡುವ ಬದಲು ನಕಾರಾತ್ಮಕ ಸುದ್ದಿಗಳನ್ನು ಹೈಲೈಟ್ ಮಾಡುತ್ತದೆ ಎಂದು ಗರಂ ಆಗಿದ್ದಾರೆ.
ನವದೆಹಲಿ (ಫೆ.18): ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ದೇಶದ ಮಾಧ್ಯಮಗಳ ವಿರುದ್ಧ ಇಂದು ಹರಿಹಾಯ್ದಿದ್ದಾರೆ. ಮಾಧ್ಯಮಗಳು ಕತಾರ್ ನಲ್ಲಿ ನಡೆಯುತ್ತಿರುವ ಸೆಮಿ ಫೈನಲ್ ಗೆ ಪ್ರವೇಶಿಸಿರುವುದನ್ನು ಫೋಕಸ್ ಮಾಡುವ ಬದಲು ನಕಾರಾತ್ಮಕ ಸುದ್ದಿಗಳನ್ನು ಹೈಲೈಟ್ ಮಾಡುತ್ತದೆ ಎಂದು ಗರಂ ಆಗಿದ್ದಾರೆ.
ಸೇವಾ ತೆರಿಗೆ ವಂಚನೆ ಮಾಡಿದ್ದಾರೆನ್ನುವ ಆರೋಪದಡಿಯಲ್ಲಿ ಕೇಂದ್ರೀಯ ಸರಕು ಸೇವಾ ಮಂಡಳಿ ನೀಡುರುವ ನೋಟಿಸ್ ಗೆ ಪ್ರತಿಕ್ರಿಯಿಸಲು ಮಿರ್ಜಾ ನಿರಾಕರಿಸಿದ್ದಾರೆ.
ಕತಾರ್ ನಲ್ಲಿ ಸೆಮಿ ಫೈನಲ್ ನಡೆಯುತ್ತಿದ್ದು ಅದರ ಬಗ್ಗೆ ಯಾವ ಮಾಧ್ಯಮಗಳು ತಲೆ ಕೆಡಿಸಿಕೊಳ್ಳುತ್ತಿಲ್ಲ. ಆದರೆ ತೆರಿಗೆ ವಂಚನೆ ಬಗ್ಗೆ ನೂರಾರು ವರದಿಗಳನ್ನು ಮಾಡಿವೆ. ವಿಷಯವನ್ನು ಸರಿಯಾಗಿ ಅರ್ಥೈಸಿಕೊಳ್ಳದೇ ನಕಾರಾತ್ಮಕವಾಗಿ ಬರೆಯುತ್ತಿವೆ ಎಂದು ಕಿಡಿ ಕಾರಿದ್ದಾರೆ.
