ಅಮೆರಿಕಾ ಓಪನ್​ ಟೆನಿಸ್​​ ಟೂರ್ನಿಯ ಮಹಿಳಾ ಡಬಲ್ಸ್​​ನಲ್ಲಿ ಮುಗುತಿ ಸುಂದರಿ ಸಾನಿಯಾ ಜೋಡಿ ಕ್ವಾರ್ಟರ್​​ ಫೈನಲ್​​ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ.

7ನೇ ಶ್ರೇಯಾಂಕಿತ ಸಾನಿಯಾ ಮಿರ್ಜಾ ಹಾಗೂ ಜೆಕ್​​​ ಗಣರಾಜ್ಯದ ಬಾರ್ಬರಾ ಸ್ಪ್ರೇಕೊವಾ ಜೋಡಿ ಅಮೇರಿಕಾ-ಜಪಾನ್​​ ಜೋಡಿಗಳಾದ ನಿಕೊಲೆ ಗಿಬ್ಸ್​​ ಹಾಗೂ ನಾವೊ ಹಿಬಿನೊ ವಿರುದ್ಧ 3ನೇ ಸುತ್ತಿನಲ್ಲಿ ಜಯದ ನಗೆ ಬೀರಿದ್ದಾರೆ.

1 ಗಂಟೆ 17 ನಿಮಿಷ ನಡೆದ ಹೋರಾಟದಲ್ಲಿ ಸಾನಿಯಾ ಜೋಡಿ ತೀವ್ರ ಪೈಪೋಟಿ ಎದುರಿಸಿದರು. ಅಂತಿಮವಾಗಿ 6-4, 7-5 ಸೆಟ್​​ಗಳಿಂದ ಜಯ ದಾಖಲಿಸುವ ಮೂಲಕ ಕ್ವಾರ್ಟರ್​​ ಫೈನಲ್​​ ಪ್ರವೇಶಿಸಿದ್ದಾರೆ.