ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೂ ಸಂಘ ಪರಿವಾರಕ್ಕೂ ಯಾವುದೇ ಸಂಬಂಧ ಇಲ್ಲ. ಈ ವಿಚಾರದಲ್ಲಿ ಇಡೀ ಕಾಂಗ್ರೆಸ್ ಎದ್ದು ನಿಂತರೂ ಸಂಘ ಪರಿವಾರವನ್ನು ಏನೂ ಮಾಡಲಾಗದು. ಇನ್ನು ವಿಚಾರವಾದಿಗಳ ಗೊಡ್ಡು ಬೆದರಿಕೆಗೆ ಹೆದರುವುದಿಲ್ಲ ಎಂದು ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕ ಈಶ್ವರಪ್ಪ ಗುಡುಗಿದ್ದಾರೆ.

ಬೆಂಗಳೂರು: ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೂ ಸಂಘ ಪರಿವಾರಕ್ಕೂ ಯಾವುದೇ ಸಂಬಂಧ ಇಲ್ಲ. ಈ ವಿಚಾರದಲ್ಲಿ ಇಡೀ ಕಾಂಗ್ರೆಸ್ ಎದ್ದು ನಿಂತರೂ ಸಂಘ ಪರಿವಾರವನ್ನು ಏನೂ ಮಾಡಲಾಗದು. ಇನ್ನು ವಿಚಾರವಾದಿಗಳ ಗೊಡ್ಡು ಬೆದರಿಕೆಗೆ ಹೆದರುವುದಿಲ್ಲ ಎಂದು ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕ ಈಶ್ವರಪ್ಪ ಗುಡುಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೌರಿ ಲಂಕೇಶ್ ಹತ್ಯೆ ಖಂಡಿಸಿ ನಡೆಸಿದ ಪ್ರತಿರೋಧ ಸಮಾವೇಶದಲ್ಲಿ ಹತ್ಯೆಯಲ್ಲಿ ಸಂಘ ಪರಿಹಾರದ ಕೈವಾಡದ ಬಗ್ಗೆ ಆರೋಪ ಮಾಡಲಾಗಿದೆ. ಸಂಘ ಪರಿವಾರ ಯಾವಾಗಲೂ ದೇಶಭಕ್ತಿಯನ್ನು ತುಂಬುವ ಕೆಲಸ ಮಾಡುತ್ತದೆ. ಎಲ್ಲಿಯೂ ಕೊಲೆ, ಸುಲಿಗೆಯಂತ ಕೆಲಸ ಮಾಡುವುದಿಲ್ಲ. ಗೌರಿ ಲಂಕೇಶ್ ವಿಚಾರ ಮತ್ತು ಸಂಘ ಪರಿವಾರದ ವಿಚಾರಗಳು ಬೇರೆ ಬೇರೆ ಇರಬಹುದು. ಹಾಗೆಂದು ಸಂಘ ಪರಿವಾರದ ಮೇಲೆ ಆರೋಪ ಮಾಡುವುದು ಸರಿಯಲ್ಲ. ಈ ಹಿಂದೆ ಮಹಾತ್ಮಗಾಂಧಿ ಹತ್ಯೆ ಸಂದರ್ಭದಲ್ಲೂ ಇದೇ ರೀತಿ ಆರ್‌ಎಸ್ಎಸ್ ಮೇಲೆ ಆರೋಪಿಲಾಗಿತ್ತು. ಆದರೆ ಏನಾಯಿತು? ಎಂದು ಖಾರವಾಗಿ ಪ್ರಶ್ನಿಸಿದರು.

ಕಲಬುರ್ಗಿ ಹತ್ಯೆ ಆರೋಪವನ್ನೂ ಸಂಘದವರ ಮೇಲೆ ಹಾಕಲಾಗುತ್ತಿದೆ. ಹಾಗಿದ್ದ ಮೇಲೆ ಹತ್ಯೆಕೋರರನ್ನು ಸರ್ಕಾರ ಏಕೆ ಹಿಡಿಯುತ್ತಿಲ್ಲ? ಸರ್ಕಾರಕ್ಕೆ ಸಾಮರ್ಥ್ಯ ಇಲ್ಲವೇ ಎಂದರು.