ಸಂಗೀತಾ ಸ್ಟೋರ್ಸ್ ಮೊಬೈಲ್ ಪ್ರಿಯರಿಗೆ ಸಿಹಿ ಸುದ್ದಿ ನೀಡಿದೆ. ಸಂಗೀತಾ ಮೊಬೈಲ್ಸ್'ನಿಂದ ಏರ್ ರೆಸ್ಕ್ಯೂ ಮೂಲಕ ಗ್ರಾಹಕರಿಗಾಗಿ ಉಚಿತ ಏರ್ ಅಂಬ್ಯುಲೆನ್ಸ್  ಸೇವೆ ನೀಡಲು ಮುಂದಾಗಿದೆ.

ಬೆಂಗಳೂರು (ನ.15): ಸಂಗೀತಾ ಸ್ಟೋರ್ಸ್ ಮೊಬೈಲ್ ಪ್ರಿಯರಿಗೆ ಸಿಹಿ ಸುದ್ದಿ ನೀಡಿದೆ. ಸಂಗೀತಾ ಮೊಬೈಲ್ಸ್'ನಿಂದ ಏರ್ ರೆಸ್ಕ್ಯೂ ಮೂಲಕ ಗ್ರಾಹಕರಿಗಾಗಿ ಉಚಿತ ಏರ್ ಅಂಬ್ಯುಲೆನ್ಸ್ ಸೇವೆ ನೀಡಲು ಮುಂದಾಗಿದೆ.

ಸಂಗೀತಾ ಮೊಬೈಲ್ ಸ್ಟೋರ್ ನಲ್ಲಿ 10 ಸಾವಿರಕ್ಕೂ ಹೆಚ್ಚು ಬೆಲೆಯ ಮೊಬೈಲ್ ಖರೀದಿ ಮಾಡಿದ ಗ್ರಾಹಕರಿಗೆ ಏರ್ ಅಂಬ್ಯುಲೆನ್ಸ್ ಸದಸ್ಯತ್ವ ಕಿಟ್ ಸಿಗುತ್ತೆ. ಆ ಮೂಲಕ ಗ್ರಾಹಕರು ನೋಂದಣಿ ಮಾಡಿಕೊಂಡು ಸದಸ್ಯತ್ವ ಕಾರ್ಡ್ ಪಡೆಯಬಹುದು. ಈ ಗ್ರಾಹಕರಿಗೆ ಜೀವನ್ಮರಣದ ಸವಾಲು ಎದುರಾದಾಗ ಈ ಉಚಿತ ಏರ್ ಅಂಬ್ಯುಲೇನ್ಸ್ ಸೇವೆ ಸಿಗಲಿದೆ.