ಕುಮಾರಸ್ವಾಮಿ ದೇವಸ್ಥಾನದ ಉಳಿವಿಗಾಗಿ ಇಂದು ಸಂಡೂರು ಪಟ್ಟಣ ಬಂದ್ ಕರೆಯಲಾಗಿದೆ. ಅಂಗಡಿ ಮುಂಗಟ್ಟು ಮುಚ್ಚುವ ಮೂಲಕ ಬಂದ್ಗೆ ಬೆಂಬಲ ನೀಡಲಾಗಿದೆ. ಸಂಡೂರು ಪಟ್ಟಣದ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಬಳ್ಳಾರಿ (ಡಿ.11): ಕುಮಾರಸ್ವಾಮಿ ದೇವಸ್ಥಾನದ ಉಳಿವಿಗಾಗಿ ಇಂದು ಸಂಡೂರು ಪಟ್ಟಣ ಬಂದ್ ಕರೆಯಲಾಗಿದೆ. ಅಂಗಡಿ ಮುಂಗಟ್ಟು ಮುಚ್ಚುವ ಮೂಲಕ ಬಂದ್ಗೆ ಬೆಂಬಲ ನೀಡಲಾಗಿದೆ. ಸಂಡೂರು ಪಟ್ಟಣದ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಐತಿಹಾಸಿಕ ದೇವಸ್ಥಾನವನ್ನು ರಾಷ್ಟ್ರೀಯ ಪಾರಂಪರಿಕ ಸ್ಮಾರಕ ಹಾಗೂ ಸುತ್ತಲಿನ 2 ಕಿ.ಮೀ. ವ್ಯಾಪ್ತಿಯ ಕುಮಾರಸ್ವಾಮಿ ಬೆಟ್ಟವನ್ನು ಸೂಕ್ಷ್ಮ ಪರಿಸರ ವಲಯವೆಂದು ಘೋಷಿಸಲು ಒತ್ತಾಯಪಡಿಸಿ ಬಂದ್ ನಡೆಸಲಾಗುತ್ತಿದೆ.
ಬೆಳಿಗ್ಗೆ 11 ಗಂಟೆಗೆ ಸಂಡೂರಿನಿಂದ ಕುಮಾರಸ್ವಾಮಿ ದೇವಸ್ಥಾನಕ್ಕೆ ಪಾದಯಾತ್ರೆ, ಕುಮಾರಸ್ವಾಮಿ ದೇವಸ್ಥಾನ ಉಳಿಸಿ ಹೋರಾಟ ಸಮಿತಿಯಿಂದ ಸಂಡೂರು ಬಂದ್'ಗೆ ಕರೆ ನೀಡಲಾಗಿದೆ.
