ಮೈಸೂರು (ಡಿ.22):ಕನ್ನಡ ಚಲನ ಚಿತ್ರರಂಗ ಬೆಚ್ಚಿ ಬೀಳಿಸುವ ಸ್ಫೋಟಕ ಸುದ್ದಿಯೊಂದು ಬಯಲಾಗಿದೆ. 

ವೇಶ್ಯಾವಾಟಿಕೆಯಲ್ಲಿ  ಸಿಕ್ಕಿಬಿದ್ದ ಯುವತಿ ಸ್ಯಾಂಡಲ್‌ವುಡ್' ಸ್ಟಾರ್ ನಟರಿಬ್ಬರ ಹೆಸರನ್ನು ಬಾಯಿ ಬಿಟ್ಟಿದ್ದಾಳೆ. ಸ್ಯಾಂಡಲ್'ವುಡ್ ಸ್ಟಾರ್ ನಟರಾದ  ಸಾಧು ಕೋಕಿಲಾ, ಮಂಡ್ಯ ರಮೇಶ್​ ನನ್ನನ್ನು ಬಳಸಿಕೊಂಡಿದ್ದಾರೆ ಎಂದು ಯುವತಿ ಆರೋಪ ಮಾಡಿದ್ದಾಳೆ.  ಈ ನಟರು  ಇಲ್ಲಿಗೆ  ಬರುತ್ತಿದ್ದರು.  ಅಲ್ಲಿ ಇರಲು ಕೂಡ ತನಗೆ ಹಿಂಸೆಯಾಗುತ್ತಿತ್ತು. ಅವರು ಹೇಳಿದಂತೆ ಕೇಳಬೇಕಿತ್ತು. ಇಲ್ಲವಾದಲ್ಲಿ  ಕೆಲಸದಿಂದ ತೆಗೆಯುವುದಾಗಿ ಹೆದರಿಸುತ್ತಿದ್ದರು. ಪೊಲೀಸರಿಗೆ ದೂರು ನೀಡುವುದಾಗಿ ಕೂಡ ಹೇಳುತ್ತಿದ್ದರು ಎಂದು ಹೇಳಿದ್ದಾಳೆ.

ಆದರೆ ಸುವರ್ಣ ನ್ಯೂಸ್'ನೊಂದಿಗೆ ಮಾತನಾಡಿದ ಮಂಡ್ಯ ರಮೇಶ್ ಈ ಸುದ್ದಿಯನ್ನು ಅಲ್ಲಗಳೆದಿದ್ದಾರೆ. ತಮಗೂ ಈ ಕೇಸ್'ಗೂ ಯಾವುದೇ ರೀತಿಯಾದ ಸಂಬಂಧವಿಲ್ಲವೆಂದು ಹೇಳಿದ್ದಾರೆ.

ಈ ಅಪಾದನೆ ನನಗೆ ನೋವುಂಟು ಮಾಡಿದೆ ಎಂದಿದ್ದಾರೆ.  ನನ್ನ ಜವಾಬ್ದಾರಿ ಕೆಲಸ ಏನು ಎನ್ನುವ ಬಗ್ಗೆ ನನಗೆ ಅರಿವಿದೆ.  ಉದ್ಘಾಟನೆ ಆದ ಮೇಲೆ ಆ ಪಾರ್ಲರ್'ಗೆ ನಾನು ಒಂದೇ ಬಾರಿ ಹೋಗಿದ್ದೆ.

ಆರೋಪ ಮಾಡುತ್ತಿರುವ ಹುಡುಗಿಯ ಪರಿಚಯವೂ ಕೂಡ ನನಗೆ ಇಲ್ಲ.  ಎಲ್ಲರೊಂದಿಗೂ ಕೂಡ ನಾನು ಅತ್ಯಂತ ಸ್ನೇಹದಿಂದ ಇರುತ್ತೇನೆ. ಜನರು ನನ್ನನ್ನು ಪ್ರೀತಿಸುತ್ತಾರೆ. ಆದರೆ ಆ ಹುಡುಗಿ ಆರೋಪ ಮಾಡುತ್ತಿರುವುದು ಸುಳ್ಳು, ಇದರ ಹಿಂದೆ ಯಾವುದೇ ರೀತಿಯಾದ ಒತ್ತಡ  ಇರಬಹುದು ಎಂದು ಹೇಳಿದ್ದಾರೆ.

ಒಡನಾಡಿ ಸಂಸ್ಥೆಯೊಂದಿಗೆ  ನನಗೆ ಉತ್ತಮ ಬಾಂಧವ್ಯವಿದೆ. ಸ್ಪಾ ಓನರ್ ರಾಜೇಶ್ ಮತ್ತು ಹುಡುಗಿಯ ನಡುವಿನ ವೈಮನಸ್ಸಿನಿಂದ  ಈ ಆರೋಪ ಮಾಡಿರಬಹುದು ಎಂದಿದ್ದಾರೆ.