ಶ್ರೀನಗರ ಸೇನಾ‌ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯಲಿದೆ. ಬಳಿಕ ಹುತಾತ್ಮ ಯೋಧರಿಗೆ ಗೌರವ ವಂದನೆ ಸಲ್ಲಿಸಲಾಗುವುದು.
ಬೆಂಗಳೂರು (ಜ.30): ಹಿಮಪಾತದಿಂದ ಮೃತಪಟ್ಟ ಯೋಧ ಸಂದೀಪ್ ಅವರ ಪಾರ್ಥಿವ ಶರೀರ ನಾಳೆ ತವರಿಗೆ ಬರುವ ಸಾಧ್ಯತೆಗಳಿವೆ.
ಸೇನಾ ಕಾರ್ಯಾಚರಣೆ ಯಶಸ್ವಿಯಾಗಿದ್ದು ಇಂದು ಶ್ರೀನಗರಕ್ಕೆ ಸಂದೀಪ್ ಪಾರ್ಥಿವ ಶರೀರ ರವಾನೆಯಾಗಿದೆ.
ಶ್ರೀನಗರ ಸೇನಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯಲಿದೆ. ಬಳಿಕ ಹುತಾತ್ಮ ಯೋಧರಿಗೆ ಗೌರವ ವಂದನೆ ಸಲ್ಲಿಸಲಾಗುವುದು.
ಅಲ್ಲಿಂದ ಮೃತದೇಹವನ್ನು ದೆಹಲಿಗೆ ತರಲಾಗುವುದು. ನಾಳೆ ಪಾರ್ಥಿವ ಶರೀರ ತವರಿಗೆ ಬರುವ ಸಾಧ್ಯತೆಗಳಿವೆ.
