ರಂಗಭೂಮಿ ಹಾಗೂ ಚಲನಚಿತ್ರರಂಗದ ಮೇರು ನಟ ಲೋಕನಾಥ್ ಕೊನೆಯುಸಿರೆಳೆದಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ್ದಾರೆ.

ಬೆಂಗಳೂರು : ರಂಗಭೂಮಿ ಹಾಗೂ ಕನ್ನಡ ಚಲನಚಿತ್ರರಂಗದ ಹಿರಿಯ ನಟ ಸಿ.ಎಚ್. ಲೋಕನಾಥ್ ಅವರು ನಿಧನರಾಗಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಲೋಕನಾಥ್ ನಿನ್ನೆ ರಾತ್ರಿ 12.15ಕ್ಕೆ ಕೊನೆಯುಸಿರೆಳೆದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು.

ರಂಗಭೂಮಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಅವರು 1972 ರಿಂದ 'ನಟರಂಗ'ದ ಪ್ರಮುಖ ನಟನಾಗಿ 'ಸಮುದಾಯ', 'ಸೂತ್ರದಾರ' ತಂಡಗಳ ಸುಮಾರು 1000 ಪ್ರದರ್ಶನಗಳಲ್ಲಿ ಭಾಗವಹಿಸಿದ್ದರು. 

ಸಿ. ಎಚ್. ಲೋಕನಾಥ್ ಭೂತಯ್ಯನ ಮಗ ಅಯ್ಯು ಸೇರಿದಂತೆ 650ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿದ್ದು, ಪೋಷಕ ಪಾತ್ರಗಳ ಮೂಲಕ ಮನೆಮಾತಾಗಿದ್ದರು.

ಸೋಮವಾರ ಮಧ್ಯಾಹ್ನ 11 ರಿಂದ ರವೀಂದ್ರ ಕಲಾಕ್ಷೇತ್ರ ಆವರಣದಲ್ಲಿ ಲೋಕನಾಥ್ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲು ವ್ಯವಸ್ಥೆ ಮಾಡುವ ಮೂಲಕ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ.

ಲೋಕನಾತ್ ಅವರು ಆಗಸ್ಟ್ 14/, 1927ರಲ್ಲಿ ಜನಿಸಿದರು. ರಂಗಭೂಮಿ ಹಾಗೂ ಚಲನಚಿತ್ರರಂಗ ಎರಡರಲ್ಲೂ ಕೂಡ ಸಕ್ರೀಯರಾಗಿದ್ದರು. 

ನಟಿಸಿದ ಪ್ರಮುಖ ಚಿತ್ರಗಳು
ಭೀಮಾ ತೀರದಲ್ಲಿ
ಪ್ರೇಮ್ ಕಹಾನಿ
ಅಂತು ಇಂತು ಪ್ರೀತಿ ಬಂತು
ಕಾಡ ಬೆಳದಿಂಗಳು
ಕಾಕನಕೋಟೆ
ಮಿಂಚಿನ ಓಟ
ಬಂಗಾರದ ಮನುಷ್ಯ
ನಾಗರಹಾವು

ಭೂತಯ್ಯನ ಮಗ ಅಯ್ಯು

ಮಾಲ್ಗುಡಿ ಡೇಸ್ ನಲ್ಲಿಯೂ ಕೂಡ ಲೋಕನಾಥ್ ನಟಿಸಿದ್ದರು.