ಬೆಂಗಳೂರು(ಅ. 08): ‌‌‌ಬಿಗ್ ಬಾಸ್ ರಿಯಾಲಿಟಿ  ಶೋನಲ್ಲಿ ಕನ್ನಡ ಚಿತ್ರರಂಗದ ನಟ-ನಟಿಯರು ಹಾಗೂ ತಂತ್ರಜ್ಞರು ಭಾಗವಹಿಸುವುದನ್ನ ಖಂಡಿಸಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಪ್ರತಿಭಟನೆ ನಡೆಸಿದೆ. ಮಂಡಳಿ ಅಧ್ಯಕ್ಷ ಸಾರಾ ಗೋವಿಂದು ನೇತೃತ್ವದಲ್ಲಿ ರಾಮನಗರದ ಬಿಡದಿ ಬಳಿ ಇರುವ ಇನೋವೇಟಿವ್ ಫಿಲಂ ಸಿಟಿ ಬಳಿ ಈ ಪ್ರತಿಭಟನೆ ನಡೆಸಲಾಗಿದೆ. ಕನ್ನಡ ಚಿತ್ರರಂಗದ ನಿರ್ಮಾಪಕರಾದ ಭಾಮ ಹರೀಶ್. ಎಂ.ಎನ್.ಸುರೇಶ್. ಕೇಶವ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಇಂದು ಇನೋವೇಟಿವ್ ಫಿಲಂ ಸಿಟಿಯಲ್ಲಿ ಪ್ರಾರಂಭವಾಗಲಿರುವ ಬಿಗ್ ಬಸ್ ಕಾರ್ಯಕ್ರಮಕ್ಕೆ ಈ ಪ್ರತಿಭಟನೆ ಬಿಸಿ ತಟ್ಟಿದೆ.

ಇದೇ ವೇಳೆ, ಸುವರ್ಣನ್ಯೂಸ್ ಜೊತೆ ಮಾತನಾಡಿದ ಸಾರಾ ಗೋವಿಂದು, ಬಿಗ್ ಬಾಸ್ ರಿಯಾಲಿಟಿ ಶೋನ ಅವಧಿಯನ್ನು 9ಗಂಟೆ ಬದಲು 10 ಗಂಟೆಗೆ ಪ್ರಸಾರ ಮಾಡಬೇಕೆಂದು ಆಗ್ರಹಿಸಿದರು. ಚಲನಚಿತ್ರ ಕಲಾವಿದರು ರಿಯಾಲಿಟಿ ಶೋಗಳಲ್ಲಿ ಪಾಲ್ಗೊಂಡರೆ ಕನ್ನಡ ಸಿನಿಮಾ ಥಿಯೇಟರುಗಳಿಗೆ ಪ್ರೇಕ್ಷಕರು ಬರುವುದು ತೀರಾ ಕಡಿಮೆಯಾಗುತ್ತದೆ ಎಂದವರು ವಾದಿಸಿದರು.