ಅವರ ಬದಲಿಗೆ ಇದೀಗ ದಾನಿಶ್ ಅಖ್ತರ್ ಸೈಫಿ ಅವರನ್ನು ಆಯ್ಕೆ ಮಾಡಿಕೊಳ್ಳಲಾಯಿತು ಎನ್ನಲಾಗಿದೆ.

ಅದ್ಧೂರಿಯಾಗಿ ಸೆಟ್ಟೇರಿದ ‘ಕುರುಕ್ಷೇತ್ರ’ ಚಿತ್ರದಲ್ಲಿ ಭೀಮಸೇನ ಪಾತ್ರ ವನ್ನು ಮಾಡಿಸಬೇಕೆಂದು ನಿರ್ದೇಶಕ ಮತ್ತು ನಿರ್ಮಾಪಕರು ಆಸೆ ಪಟ್ಟಿದ್ದು ಖಳನಟ ಅನಿಲ್ ಅವರಿಂದ. ದುರಾ ದೃಷ್ಟವಶಾತ್ ಅನಿಲ್ ಅವರು ‘ಮಾಸ್ತಿಗುಡಿ’ ಚಿತ್ರದ ಶೂಟಿಂಗ್ ವೇಳೆ ಅಸ್ತಂಗತರಾದರು. ಹಾಗಾಗಿ ಅವರ ಬದಲಿಗೆ ಇದೀಗ ದಾನಿಶ್ ಅಖ್ತರ್ ಸೈಫಿ ಅವರನ್ನು ಆಯ್ಕೆ ಮಾಡಿಕೊಳ್ಳಲಾಯಿತು ಎನ್ನಲಾಗಿದೆ. ಮೂಲತಃ ಮುಂಬೈಯವರಾದ ದಾನಿಶ್ ಹಿಂದಿಯ ಸಿಯಾ ಕಿ ರಾಮ್ ಧಾರಾವಾಹಿಯಲ್ಲಿ ಹನುಮಂತನ ಪಾತ್ರವನ್ನು ನಿರ್ವಹಿಸುವ ಮೂಲಕ ಖ್ಯಾತರಾಗಿದ್ದರು. ಅವರ ದೇಹದಾರ್ಢ್ಯತೆ ಭೀಮನ ಪಾತ್ರಕ್ಕೆ ಸರಿ ಹೊಂದುತ್ತದೆ ಎಂಬ ಕಾರಣಕ್ಕೆ ಕೊನೆಗೆ ದಾನಿಶ್ ಅವರನ್ನು ತಂಡ ಆಯ್ಕೆ ಮಾಡಿತು

(ಕನ್ನಡಪ್ರಭ ವಾರ್ತೆ)