ಇನ್ನೇನು ದೇಶದಲ್ಲಿ ಚುನಾವಣೆ ಸಮೀಪಿಸುತ್ತಿದೆ. ಇದೇ ಸಂದರ್ಭದಲ್ಲಿ ಸನಾತನ ಮಠದ ಸ್ವಾಮೀಜಿ ಭವಿಷ್ಯ ನುಡಿದಿದ್ದು ದೇಶದಲ್ಲಿ  ಬಿ.ಎಸ್ ಯಡಿಯೂರಪ್ಪ ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಹೇಳಿದ್ದಾರೆ. 

ನೆಲಮಂಗಲ : ಮುಂಬ​ರು​ವ ಲೋಕ​ಸಭಾ ಚುನಾ​ವ​ಣೆ​ಯಲ್ಲಿ ಯಾವುದೇ ಪಕ್ಷಕ್ಕೆ ಬಹು​ಮ​ತ ಬರುವುದಿಲ್ಲ. ಆದರೆ, ನರೇಂದ್ರ ​ಮೋದಿ ಮತ್ತೊಮ್ಮೆ ಪ್ರಧಾ​ನಿ​ಯಾ​ಗ​ಲಿದ್ದಾರೆ. 

ಅದೇ ರೀತಿ ರಾಜ್ಯ​ದಲ್ಲಿ ಬಿಜೆಪಿ ರಾಜ್ಯಾ​ಧ್ಯಕ್ಷ ಬಿ.ಎ​ಸ್‌.​ಯ​ಡಿ​ಯೂ​ರಪ್ಪ ಕೂಡ ಮತ್ತೊಮ್ಮೆ ಮುಖ್ಯ​ಮಂತ್ರಿ​ಯಾ​ಗ​ಲಿ​ದ್ದಾರೆ ಎಂದು ತಾಲೂ​ಕಿ​ನ ಅರ್ಜುನ ಬೆಟ್ಟ​ಹ​ಳ್ಳಿಯ ಶ್ರೀ ಪರಿ​ಪೂರ್ಣ ಸನಾ​ತನ ಮಠದ ಶ್ರೀನಿ​ವಾಸ ಸ್ವಾಮೀಜಿ ಭವಿಷ್ಯ ನುಡಿ​ದಿದ್ದಾ​ರೆ. ಶುಕ್ರ​ವಾರ ಸಂಜೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮಠಕ್ಕೆ ಭೇಟಿ ನೀಡಿ​ದಾಗ ಆಶೀ​ರ್ವ​ದಿಸಿ ಈ ಭವಿಷ್ಯ ಹೇಳಿದರು.

2019ರ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟಬಹುಮತ ಬರುವುದಿಲ್ಲ. ಆದರೆ 2019ರ ಚುನಾವಣೆ ನಂತರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ. ರಾಜ್ಯದಲ್ಲಿ ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಇದೇ ವೇಳೆ ತಿಳಿಸಿದ್ದಾರೆ.