ಸಿಲಿಕಾನ್ ಸಿಟಿಗೆ ಹೊಸತೊಂದು ಹಿರಿಮೆಯ ಗರಿಯಾಗಿರುವ ಮೆಟ್ರೋ ರೈಲು ದಿನ ಕಳೆದಂತೆ,ಈ ಮಹಾನಗರದಲ್ಲಿ ತನ್ನ ವಿಸ್ತಾರವನ್ನು ಹೆಚ್ಚಿಸಿಕೊಳ್ಳುತ್ತಿದೆ. ಸುಂದರವಾದ ನಿಲ್ದಾಣ, ಎಸಿ ಕೋಚ್​, ಯಾರ ಕಿರಿಕಿರಿ ಇಲ್ಲದೆ ಕಣ್ಮುಚಿ ತೆಗೆಯೋವಷ್ಟರಲ್ಲಿ ನಮ್ಮ ನಿಲ್ದಾಣ...ಇಂತಹ ಅದ್ಭುತ ಸೇವೆಗೆ ಇಡೀ ಬೆಂಗಳೂರಿನ ಜನ ಮರಳಾಗಿದ್ದಾರೆ.

ಬೆಂಗಳೂರು (ಜೂ.22): ಸಿಲಿಕಾನ್ ಸಿಟಿಗೆ ಹೊಸತೊಂದು ಹಿರಿಮೆಯ ಗರಿಯಾಗಿರುವ ಮೆಟ್ರೋ ರೈಲು ದಿನ ಕಳೆದಂತೆ,ಈ ಮಹಾನಗರದಲ್ಲಿ ತನ್ನ ವಿಸ್ತಾರವನ್ನು ಹೆಚ್ಚಿಸಿಕೊಳ್ಳುತ್ತಿದೆ. ಸುಂದರವಾದ ನಿಲ್ದಾಣ, ಎಸಿ ಕೋಚ್​, ಯಾರ ಕಿರಿಕಿರಿ ಇಲ್ಲದೆ ಕಣ್ಮುಚಿ ತೆಗೆಯೋವಷ್ಟರಲ್ಲಿ ನಮ್ಮ ನಿಲ್ದಾಣ...ಇಂತಹ ಅದ್ಭುತ ಸೇವೆಗೆ ಇಡೀ ಬೆಂಗಳೂರಿನ ಜನ ಮರಳಾಗಿದ್ದಾರೆ.

ಇದೇ ತಿಂಗಳ 17 ರಂದು ಉದ್ಘಾಟನೆಗೊಳ್ಳಲಿರುವ ಸಂಪಿಗೆ ರಸ್ತೆಯಿಂದ ಯಲಚ್ಚೇನ ಹಳ್ಳಿ ಮಾರ್ಗ ಎಲ್ಲರ ಗಮನ ಸೆಳೆಯುತ್ತಿದೆ.. ಉದ್ಘಾಟನೆ ದಿನಾಂಕ ಹತ್ತಿರವಾಗುತ್ತಿದ್ದಂತೆ ಮೆಟ್ರೋ ನಿಗಮದ ಅಧಿಕಾರಿಗಳು ತಯಾರಿಯನ್ನು ಭರದಿಂದ ನಡೆಸಿದ್ದಾರೆ. ಇಂದು ಕೂಡಾ ಮೆಟ್ರೋ ನಿರ್ದೇಶಕರಾದ ಪ್ರದೀಪ ಸಿಂಗ್​ ಖರೋಲಾ ಸೇರಿದಂತೆ ಹಲವು ಅಧಿಕಾರಿ ಇಂಟರ್​ಚೇನ್​ ಮೆಟ್ರೋ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಮಾರ್ಗದ ಸೆಂಟರ್​ ಆಫ್​ ಅಟ್ರಾಕ್ಷನ್ ಅಂದ್ರೆ ಅದು ಮೆಜೆಸ್ಟಿಕ್​ ನಿಲ್ದಾಣ. ಕಾರಣ ಇದು ಐದು ಪುಟ್​ ಬಾಲ್​ ಮೈದಾನದಷ್ಟು ವಿಸ್ತೀರ್ಣ ಇದೆ. 60 ಅಡಿ ಆಳದಲ್ಲಿ ಎರಡು ನಿಲ್ದಾಣಗಳ ಹೊಂದಿದ್ದು, ಐದು ಪ್ರವೇಶ ದ್ವಾರ , 26 ಏಕ್ಸೋಲೆಟರ್​ಗಳನ ಹೊಂದಿದೆ. ಇಂತಹ ಅದ್ಭುತ ನಿಲ್ದಾಣ ಇದೇ ತಿಂಗಳ 17ಕ್ಕೆ ರಾಷ್ಟ್ರಪತಿಯವರಿಂದ ಲೋಕಾರ್ಪಣೆಗೊಳಲ್ಲಿದೆ..

 ಒಟ್ಟಿನಲ್ಲಿ , ಕೆಲವಾರು ವರ್ಷಗಳ ಹಿಂದೆ ಮೆಟ್ರೋ ನಿರ್ಮಾಣಕ್ಕಾಗಿ ರಸ್ತೆ ಮಗ್ಗುಲಲ್ಲಿ ಗುಂಡಿ ತೋಡಿ ಸಂಚಾರಕ್ಕೆ ಭಾರೀ ತೊಂದರೆಯಾಗಿದ್ದಾಗಲೆಲ್ಲಾ ಮನಸ್ಸಿನಲ್ಲೇ ಬಯ್ದುಕೊಳ್ಳುತ್ತಿದ್ದ ಜನರು ಈಗ ಮೆಟ್ರೋನ ಅನುಕೂಲ ನೋಡಿ ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ.