2013ರ ಆಗಸ್ಟ್ 30 ರಂದು ಪುಣೆಯಲ್ಲಿ ವಿಚಾರವಾದಿ ನರೇಂದ್ರ ದಾಭೋಲ್ಕರ್ ಅವರ ಮೇಲೆ 7.65 ಎಂಎಂ ಪಿಸ್ತೂಲ್‌'ನಿಂದ ಗುಂಡು ಹಾರಿಸಿ ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಇದಾದ 2015ರ ಫೆಬ್ರವರಿ 16 ರಂದು ಕೊಲ್ಲಾಪುರದಲ್ಲಿ ಪ್ರಗತಿ ಪರ ಚಿಂತಕ ಗೋವಿಂದ ಪಾನ್ಸರೆ ಮತ್ತು ಅವರ ಪತ್ನಿ ಉಮಾ ಮೇಲೆ ಕಿಡಿಗೇಡಿಗಳು ಐದು ಸುತ್ತು ಗುಂಡು ಹಾರಿಸಿದ್ದರು. ಆಗ ಘಟನಾ ಸ್ಥಳದಲ್ಲಿ ಪತ್ತೆಯಾದ ಕಾರ್ಟ್ರಿಜ್ ಹಾಗೂ ಗುಂಡುಗಳನ್ನು ಪರೀಕ್ಷಿಸಿದ ಮಹಾರಾಷ್ಟ್ರದ ಎಫ್'ಎಸ್‌ಎಲ್ ತಜ್ಞರು, ಉಮಾ ಮತ್ತು ನರೇಂದ್ರ ದಾಭೋಲ್ಕರ್ ಮೇಲೆ ಒಂದೇ ಪಿಸ್ತೂಲ್‌'ನಿಂದ ಗುಂಡು ಹಾರಿಸಲಾಗಿದೆ ಎಂದು ವರದಿ ನೀಡಿದ್ದರು.

ಬೆಂಗಳೂರು(ಸೆ.15): 2013ರ ಆಗಸ್ಟ್ 30 ರಂದು ಪುಣೆಯಲ್ಲಿ ವಿಚಾರವಾದಿ ನರೇಂದ್ರ ದಾಭೋಲ್ಕರ್ ಅವರ ಮೇಲೆ 7.65 ಎಂಎಂ ಪಿಸ್ತೂಲ್‌'ನಿಂದ ಗುಂಡು ಹಾರಿಸಿ ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಇದಾದ 2015ರ ಫೆಬ್ರವರಿ 16 ರಂದು ಕೊಲ್ಲಾಪುರದಲ್ಲಿ ಪ್ರಗತಿ ಪರ ಚಿಂತಕ ಗೋವಿಂದ ಪಾನ್ಸರೆ ಮತ್ತು ಅವರ ಪತ್ನಿ ಉಮಾ ಮೇಲೆ ಕಿಡಿಗೇಡಿಗಳು ಐದು ಸುತ್ತು ಗುಂಡು ಹಾರಿಸಿದ್ದರು. ಆಗ ಘಟನಾ ಸ್ಥಳದಲ್ಲಿ ಪತ್ತೆಯಾದ ಕಾರ್ಟ್ರಿಜ್ ಹಾಗೂ ಗುಂಡುಗಳನ್ನು ಪರೀಕ್ಷಿಸಿದ ಮಹಾರಾಷ್ಟ್ರದ ಎಫ್'ಎಸ್‌ಎಲ್ ತಜ್ಞರು, ಉಮಾ ಮತ್ತು ನರೇಂದ್ರ ದಾಭೋಲ್ಕರ್ ಮೇಲೆ ಒಂದೇ ಪಿಸ್ತೂಲ್‌'ನಿಂದ ಗುಂಡು ಹಾರಿಸಲಾಗಿದೆ ಎಂದು ವರದಿ ನೀಡಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಂದು ಗುಂಡಿನ ದಾಳಿಗೊಳಗಾಗಿದ್ದ ಉಮಾ ಅವರು ಪ್ರಾಣಾಪಾಯದಿಂದ ಸುರಕ್ಷಿತವಾದರೆ, ಐದು ದಿನಗಳ ಬಳಿಕ ಚಿಕಿತ್ಸೆ ಫಲಿಸದೆ ಪಾನ್ಸರೆ ಕೊನೆಯುಸಿರೆಳೆದಿದ್ದರು. ಈ ಹತ್ಯೆಗಳು ಮರೆಯುವ ಮುನ್ನವೇ 2015ರ ಆಗಸ್ಟ್ 30ರಂದು ಧಾರವಾಡದ ಕಲ್ಯಾಣ ನಗರದ ತಮ್ಮ ನಿವಾಸದಲ್ಲೇ ಹಿರಿಯ ಸಂಶೋಧಕ ಕಲ್ಬುರ್ಗಿ ಅವರು ಆಗಂತುಕರ ಗುಂಡೇಟಿಗೆ ಬಲಿಯಾದರು. ಆಗ ಪಾನ್ಸರೆ ಹಾಗೂ ನರೇಂದ್ರ ದಾಭೋಲ್ಕರ್ ಕೊಲೆ ಪ್ರಕರಣದ ತನಿಖಾ ತಂಡಗಳಿಂದ ಮಾಹಿತಿ ಪಡೆದ ಸಿಐಡಿ ಅಧಿಕಾರಿಗಳು, ಆ ಎರಡು ಕೊಲೆಗೂ ಕಲ್ಬುರ್ಗಿ ಅವರ ಸಾಮ್ಯತೆ ಬಗ್ಗೆ ತಿಳಿದುಕೊಳ್ಳಲು ಎಫ್'ಎಸ್‌ಎಲ್ ಮೊರೆ ಹೋಗಿದ್ದರು. ಮತ್ತೆ ಕಲ್ಬುರ್ಗಿ ಅವರ ಮನೆಯಲ್ಲಿ ಸಿಕ್ಕಿದ್ದ ಮೂರು ಗುಂಡುಗಳು ಹಾಗೂ ಪಾನ್ಸರೆ ಅವರ ಹತ್ಯೆಯಲ್ಲಿ ಸಿಕ್ಕಿದ್ದ ಮೂರು ಗುಂಡುಗಳು ಪರೀಕ್ಷೆಯಲ್ಲಿ ಹೊಂದಾಣಿಕೆಯಾಗಿದ್ದು, ಅವುಗಳು ಮತ್ತೆ ಒಂದೇ ಪಿಸ್ತೂಲ್‌'ನಿಂದಲೇ ಹಾರಿರುವುದನ್ನು ತಜ್ಞರು ಖಚಿತಪಡಿಸಿದ್ದರು ಎಂದು ತಿಳಿದು ಬಂದಿದೆ.

ಗೌರಿ ಕೊಲೆ ಪ್ರಕರಣದ ತನಿಖೆಗಿಳಿದಿರುವ ಎಸ್‌ಐಟಿ ತಂಡವು, ಸಿಐಡಿ ಅವರ ಬಳಿ ಇದ್ದ ಕಲ್ಬುರ್ಗಿ ಅವರ ದೇಹ ಹೊಕ್ಕಿದ್ದ ಗುಂಡುಗಳನ್ನು ವಶಕ್ಕೆ ಪಡೆದು ಎಫ್'ಎಸ್‌ಎಲ್‌ಗೆ ಕಳುಹಿಸಿತ್ತು. ಅದನ್ನು ಪರೀಕ್ಷಿಸಿದ ಬ್ಯಾಲಿಸ್ಟಿಕ್ ತಜ್ಞರು, ಎರಡು ಕೃತ್ಯಗಳಿಗೂ ಒಂದೇ ವೆಪನ್ ಬಳಕೆಯಾಗಿದೆ ಎಂಬುದನ್ನು ಖಚಿತಪಡಿಸಿದ್ದಾರೆ. ಈ ಮಾಹಿತಿ ಪಡೆದ ಎಸ್‌ಐಟಿ ಅಧಿಕಾರಿಗಳು, ಮಹಾರಾಷ್ಟ್ರದ ಎಸ್‌ಐಟಿ ಮತ್ತು ಸಿಬಿಐ ಅಧಿಕಾರಿಗಳನ್ನು ಸಂಪರ್ಕಿಸಿ ಸಮಾಲೋಚಿಸಿದ್ದಾರೆ.