ಬೊಮ್ಮನಹಳ್ಳಿ: ಲೋಕಸಭಾ ಚುನಾವಣೆ ವೇಳೆ ಸಮರ್ಥನಂ ಟ್ರಸ್ಟ್‌ ನೀಡಿದ ಬೆಂಬಲ, ವಹಿಸಿದ ಶ್ರಮದಿಂದ ನನ್ನ ಗೆಲುವು ಸಾಧ್ಯವಾಯಿತು ಎಂದು ಸಂಸದ ತೇಜಸ್ವಿ ಸೂರ‍್ಯ ತಿಳಿಸಿದರು.

ಎಚ್‌ಎಸ್‌ಆರ್‌ನ ಸಮರ್ಥಂ ಟ್ರಸ್ಟ್‌ನಲ್ಲಿ ನಡೆದ ಕಾರ‍್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಚುನಾವಣೆಗೆ ಸ್ಪರ್ಧಿಸಲು ಅವಕಾಶ ಒದಗಿ ಬಂತು. ಹೇಗೆ ಕಾರ್ಯ ಪ್ರಾರಂಭಿಸಲಿ, ಎಲ್ಲಿಂದ ಚಾಲನೆ ಕೊಡಲಿ ಎಂಬ ಗೊಂದಲದಲ್ಲಿದ್ದಾಗ ಸಮರ್ಥಂ ಟ್ರಸ್ಟ್‌ನ ಮಹಂತೇಶ್‌ ಅವರು ನನ್ನನ್ನು ಭೇಟಿಯಾಗಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಾದ್ಯಂತ ಸುಮಾರು 5 ಲಕ್ಷಕ್ಕೂ ಅಧಿಕ ಮತದಾರರ ಡೇಟಾ ತಮ್ಮಲ್ಲಿದೆ. 
150ಕ್ಕೂ ಅಧಿಕ ಮಂದಿ ನಮ್ಮ ಸಮರ್ಥನಂ ಟ್ರಸ್ಟ್‌ನ ಉದ್ಯೋಗಿಗಳು ಕಾಲ್‌ಸೆಂಟರ್‌ನಲ್ಲಿ ಉದ್ಯೋಗದಲ್ಲಿದ್ದಾರೆ. ನಾವು ಒಟ್ಟಾಗಿ ನಿಮ್ಮ ಗೆಲುವಿಗೆ ಶ್ರಮಿಸುವುದಾಗಿ ಸಾಥ್‌ ನೀಡಿದರು ಎಂದು ಸ್ಮರಿಸಿದರು. 

ತೇಜಸ್ವಿ ಅವರು ನ್ಯಾಷನಲ್‌ ಕಾಲೇಜಿನಲ್ಲಿ ಓದುವಾಗ ಅವರಿಗೆ ಗುರುಗಳಾಗಿದ್ದ ಗೀತಾ ರಾಮಾನುಜಂ ಅವರು ಸಂಸದರನ್ನು ಸನ್ಮಾನಿಸಿದರು.