ಅತ್ಯಂತ ಹೆಚ್ಚು ಪ್ರಮಾಣದಲ್ಲಿ ಕ್ರಿಮಿನಲ್ ಹಿನ್ನೆಲೆ ಹೊಂದಿದವರನ್ನು ವಿಧಾನಸಭೆ ಮತ್ತು ಸಂಸತ್‌ಗೆ ಕಳುಹಿಸಿಕೊಡುವ ಪರಂಪರೆ ಹೊಂದಿದ ಎಸ್‌ಪಿ, 2019 ರ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನೀಡುವ ಮಾನದಂಡ ಕಠಿಣ ಗೊಳಿಸಲು ನಿರ್ಧರಿಸಿದೆ.

ಲಖನೌ(ಡಿ.31): ಅತ್ಯಂತ ಹೆಚ್ಚು ಪ್ರಮಾಣದಲ್ಲಿ ಕ್ರಿಮಿನಲ್ ಹಿನ್ನೆಲೆ ಹೊಂದಿದವರನ್ನು ವಿಧಾನಸಭೆ ಮತ್ತು ಸಂಸತ್‌ಗೆ ಕಳುಹಿಸಿಕೊಡುವ ಪರಂಪರೆ ಹೊಂದಿದ ಎಸ್‌ಪಿ, 2019 ರ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನೀಡುವ ಮಾನದಂಡ ಕಠಿಣ ಗೊಳಿಸಲು ನಿರ್ಧರಿಸಿದೆ. ಅದರನ್ವಯ, ಧರಣಿ, ಪ್ರತಿಭಟನೆ ಹೊರತು ಬೇರಾವುದೇ ಕ್ರಿಮಿನಲ್ ಕೇಸು ದಾಖಲಾಗಿದ್ದವರಿಗೆ ಟಿಕೆಟ್ ನೀಡಲ್ಲ ಎಂದು ಘೋಷಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಲೋಕಸಭಾ ಟಿಕೆಟ್ ಆಕಾಂಕ್ಷಿಗಳಿಂದ ಪಕ್ಷ ಅರ್ಜಿ ಅಹ್ವಾನಿಸಿದ್ದು, ಸಲ್ಲಿಕೆಗೆ 2018 ರ ಜ.31 ಕಡೆಯ ದಿನ. ನಿಗದಿತ ಫಾರ್ಮ್ ಅನ್ನು 10000ರು. ಹಣದೊಂದಿಗೆ ಭರ್ತಿ ಮಾಡಿ ಸಲ್ಲಿಸಲು ಸೂಚಿಸಲಾಗಿದೆ.