ಲಕ್ನೋ, [ಮಾ.08]: ಮುಂಬರುವ ಲೋಕಸಭಾ ಚುನಾವಣೆಗೆ ಸಮಾಜವಾದಿ ಪಕ್ಷ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಮೊದಲ ಪಟ್ಟಿಯಲ್ಲಿ ತನ್ನ ಆರು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಅವರು ಉತ್ತರ ಪ್ರದೇಶದ ಮೈನ್ ಪುರಿಯಿಂದ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

ಲೋಕಸಭಾ ಚುನಾವಣೆ : ಸೋನಿಯಾ, ರಾಹುಲ್ ಕ್ಷೇತ್ರ ಫಿಕ್ಸ್

ಬಿಡುಗಡೆಯಾದ ಅಭ್ಯರ್ಥಿಗಳ ಪಟ್ಟಿ

ಮುಲಾಯಂ ಸಿಂಗ್ ಯಾದವ್(ಮೈನ್ ಪುರಿ)
ಧರ್ಮೇಂದ್ರ ಯಾದವ್ (ಬದೌನ್)
ಅಕ್ಷಯ್ ಯಾದವ್(ಫಿರೀಜಾಬಾದ್)
ಕಮಲೇಶ್ ಕಠಾರಿಯಾ(ಇಟಾವಾಹ್)
ಶಬ್ಬೀರ್ ವಾಲ್ಮಿಕಿ (ಬೆಹ್ರೈಚ್)
ಭೈ ಲಾಲ್ (ರಾಬರ್ಟ್ಸ್ ಗಂಜ್)

ಉತ್ತರ ಪ್ರದೇಶದ ಒಟ್ಟು 80 ಲೋಕಸಭಾ ಕ್ಷೇತ್ರಗಳಲ್ಲಿ ಸಮಾಜವಾದಿ, ಬಹುಜನ ಸಮಾಜ ಪಕ್ಷಗಳು ಮೈತ್ರಿ ಮಾಡಿಕೊಂಡಿವೆ. ಈ ಪೈಕಿ  76 ಕ್ಷೇತ್ರಗಳಲ್ಲಿ ಈ ಉಭಯ ಪಕ್ಷಗಳು ಸ್ಪರ್ಧಿಸಲಿದ್ದು, ತಲಾ 38 ಕ್ಷೇತ್ರಗಳಲ್ಲಿ ಕಣಕ್ಕಿಳಿಯಲಿವೆ.