ನವದೆಹಲಿ(ಮಾ.22): ಬಾಲಾಕೋಟ್ ಸಾಕ್ಷಿ ಕೇಳಿ ವಿವಾದ ಸೃಷ್ಟಿಸಿರುವ ಕಾಂಗ್ರೆಸ್  ಅಧ್ಯಕ್ಷ ರಾಹುಲ್ ಗಾಂಧಿ ಆಪ್ತ ಸ್ಯಾಮ್ ಪಿತ್ರೋಡಾ, ಪ್ರಧಾನಿ ಮೋದಿ ಅವರನ್ನು ಟೀಕಿಸುವ ಭರದಲ್ಲಿ ತಮ್ಮ ಪಾಕಿಸ್ತಾನ ಪ್ರೀತಿಯನ್ನೂ ಹೊರ ಹಾಕಿದ್ದಾರೆ .

ಬಾಲಾಕೋಟ್ ದಾಳಿಯ ಕುರಿತು ಕೇಂದ್ರ ಸರ್ಕಾರ ಇನ್ನಷ್ಟು ಸಾಕ್ಷ್ಯ ಕೊಡಬೇಕು ಎಂದು ಸ್ಯಾಮ್ ಕೇಳಿದ್ದರು. ಈ ವೇಳೆ ಮುಂಬೈ ದಾಳಿ ಪ್ರಸ್ತಾಪಿಸಿದ್ದ ಸ್ಯಾಮ್, 8 ಜನ ಸೇರಿ ಮಾಡಿದ ಕೃತ್ಯಕ್ಕೆ ಇಡೀ ದೇಶವನ್ನು ಹೇಗೆ ಹೊಣೆ ಮಾಡಲು ಸಾಧ್ಯ ಎಂದು ಪರೋಕ್ಷವಾಗಿ ಪಾಕಿಸ್ತಾನವನ್ನು ಬೆಂಬಲಿಸಿದ್ದಾರೆ.

ಯಾರೋ ತಲೆ ಕೆಟ್ಟವರಿಂದ ನಡೆದ ದುಷ್ಕೃತ್ಯಕ್ಕೆ ಇಡೀ ದೇಶವನ್ನು ಮತ್ತು ಅಲ್ಲಿನ ಜನರನ್ನು ದೂಷಿಸುವುದು ಎಷ್ಟು ಸರಿ ಎಂದಿರುವ ಸ್ಯಾಮ್, ಈ ರೀತಿಯ ರಾಜಕಾರಣ ಮಾಡುವುದು ಬಿಜೆಪಿ ಮಾತ್ರ ಎಂದು ಹಂಗಿಸಿದ್ದಾರೆ.