ಸಮರ್ಥವಾಗಿ ಅಧ್ಯಕ್ಷ ಪಟ್ಟವನ್ನು ಇಲ್ಲಿಯವರೆಗೆ ನಿಭಾಯಿಸಿದ ಸೋನಿಯಾ ಜಿ ಅವರಿಗೆ ನಮ್ಮ ಸಲ್ಯೂಟ್, ಅವರಂತೆಯೇ ರಾಹುಲ್ ಗಾಂಧಿ ಅವರೂ ಕೂಡ ನಿಭಾಯಿಸಿಕೊಂಡು ಹೋಗಲಿದ್ದಾರೆ ಎನ್ನುವ ಭರವಸೆ ನಮ್ಮಲ್ಲಿದೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ.

ನವದೆಹಲಿ (ಡಿ.16): ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಪಟ್ಟಾಭಿಷೇಕ ನೆರವೇರಿಸಲಾಗುತ್ತಿದೆ. ನವದೆಹಲಿಯ ಎಐಸಿಸಿ ಕಚೇರಿಯಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ರಾಹುಲ್ ಪಟ್ಟಾಭಿಷೇಕದ ಹಿನ್ನೆಲೆಯಲ್ಲಿ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ಈ ವೇಳೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮಾತನಾಡಿದ್ದಾರೆ.

ಗಣ್ಯರ ಸಮ್ಮುಖದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಮಾತನಾಡಿದ ಮನಮೋಹನ್ ಸಿಂಗ್ ಸೋನಿಯಾ ಗಾಂಧಿ ಅವರು ರಾಹುಲ್ ಗಾಂಧಿ ಅವರಿಗೆ ಅಧ್ಯಕ್ಷತೆ ವಹಿಸುತ್ತಿದ್ದಾರೆ.

ದೇಶದಾದ್ಯಂತ ಬಡತನ ಹೆಚ್ಚಿನ ಪ್ರಮಾಣದಲ್ಲಿದೆ. ಈ ಅನೇಕ ಸಮಸ್ಯೆಗಳು ದೇಶದಲ್ಲಿವೆ. ಈ ಸಮಸ್ಯೆಗಳನ್ನೆಲ್ಲಾ ರಾಹುಲ್ ನೇತೃತ್ವದಲ್ಲಿ ಪಕ್ಷವು ನಿವಾರಿಸುವ ಬಗ್ಗೆ ಗಮನವನ್ನು ಹರಿಸಲಿದೆ.

ಸಮರ್ಥವಾಗಿ ಅಧ್ಯಕ್ಷ ಪಟ್ಟವನ್ನು ಇಲ್ಲಿಯವರೆಗೆ ನಿಭಾಯಿಸಿದ ಸೋನಿಯಾ ಜಿ ಅವರಿಗೆ ನಮ್ಮ ಸಲ್ಯೂಟ್, ಅವರಂತೆಯೇ ರಾಹುಲ್ ಗಾಂಧಿ ಅವರೂ ಕೂಡ ನಿಭಾಯಿಸಿಕೊಂಡು ಹೋಗಲಿದ್ದಾರೆ ಎನ್ನುವ ಭರವಸೆ ನಮ್ಮಲ್ಲಿದೆ ಎಂದು ಹೇಳಿದ್ದಾರೆ.