ಕೆಲವೆಡೆಗಳಲ್ಲಿ ಚಿಲ್ಲರೆ ಇಲ್ಲದ ಕಾರಣ, 3 ಕಿಗ್ರಾಂ ಉಪ್ಪುಗೆ 500 ಸ್ವೀಕರಿಸಲಾಗಿದೆ. ದೆಹಲಿಯಲ್ಲೂ ಕೆಲವೆಡೆ ಹೆಚ್ಚಿನ ಬೆಲೆಗೆ ಉಪ್ಪು ಮಾರಾಟ ಮಾಡುತ್ತಿದ್ದ ಬಗ್ಗೆ ವರದಿಯಾಗಿದೆ.
ನವದೆಹಲಿ(ನ.12): ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಶುಕ್ರವಾರ ರಾತ್ರಿ ಉಪ್ಪಿನ ದಾಸ್ತಾನು ಕೊರತೆಯ ಬಗ್ಗೆ ಊಹಾಪೋಹಗಳು ಹರಡಿದುದರಿಂದ ಜನರು ಆತಂಕಿತರಾದರು. ಹೀಗಾಗಿ ಮಾರುಕಟ್ಟೆಗಳಿಗೆ ಧಾವಿಸಿದ ಗ್ರಾಹಕರು ಹೆಚ್ಚಿನ ಬೆಲೆ ನೀಡಿ, ಉಪ್ಪು ಸಂಗ್ರಹಿಸಿದರು. ಘಟನೆ ನಡೆದ ಮೊರಾದಾಬಾದ್‌ನ ಕತ್ರಾನಾಜ್ ಪ್ರದೇಶಕ್ಕೆ ಪೊಲೀಸರನ್ನು ಕಳುಹಿಸಲಾಗಿದೆ ಎಂದು ಕೊತ್ವಾಲಿ ಪ್ರದೇಶದ ಪೊಲೀಸ್ ಅಕಾರಿ ಪೂನಂ ಮಿಶ್ರಾ ಹೇಳಿದ್ದಾರೆ.
ಕರ್ಬುಲ ಮಾರುಕಟ್ಟೆ ಮತ್ತು ಮುಕ್ಬಾರ ಪ್ರದೇಶದಲ್ಲೂ ಊಹಾಪೋಹಗಳು ಹರಡಿದ್ದವು. ಕೆಲವೆಡೆಗಳಲ್ಲಿ ಚಿಲ್ಲರೆ ಇಲ್ಲದ ಕಾರಣ, 3 ಕಿಗ್ರಾಂ ಉಪ್ಪುಗೆ 500 ಸ್ವೀಕರಿಸಲಾಗಿದೆ. ದೆಹಲಿಯಲ್ಲೂ ಕೆಲವೆಡೆ ಹೆಚ್ಚಿನ ಬೆಲೆಗೆ ಉಪ್ಪು ಮಾರಾಟ ಮಾಡುತ್ತಿದ್ದ ಬಗ್ಗೆ ವರದಿಯಾಗಿದೆ.
