1998ರ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಸಲ್ಮಾನ್ ಖಾನ್`ಗೆ ಬಿಗ್ ರಿಲೀಫ್ ಸಿಕ್ಕಿದೆ. ಸಲ್ಮಾನ್ ಖಾನ್ ಅವರನ್ನ ಖುಲಾಸೆಗೊಳಿಸಿ ಕೋರ್ಟ್ ತೀರ್ಪು ನೀಡಿದೆ.

ಜೋಧಪುರ್(ಜ.18): 1998ರ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಸಲ್ಮಾನ್ ಖಾನ್`ಗೆ ಬಿಗ್ ರಿಲೀಫ್ ಸಿಕ್ಕಿದೆ. ಸಲ್ಮಾನ್ ಖಾನ್ ಅವರನ್ನ ಖುಲಾಸೆಗೊಳಿಸಿ ಕೋರ್ಟ್ ತೀರ್ಪು ನೀಡಿದೆ.

ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಪ್ರಕರಣ, ಕೃಷ್ಣ ಬೇಟೆ ಸೇರಿದಂತೆ ಎಲ್ಲ ಆರೋಪಗಳಿಂದ ಸಲ್ಮಾನ್ ಖಾನ್ ಅವರನ್ನ ಕೋರ್ಟ್ ಆರೋಪಮುಕ್ತಗೊಳಿಸಿದೆ.

1998ರಲ್ಲಿ ಹಮ್ ಸಾತ್ ಸಾತ್ ಹೈನ್ ಚಿತ್ರದ ಶೂಟಿಂಗ್ ವೇಳೆ ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿದ್ದ ಆರೋಪ ಸಲ್ಲೂ ಮೇಲಿತ್ತು. ಸೆಕ್ಷನ್ 3/25 ಮತ್ತು 3/27ರಡಿ ಕೇಸ್ ದಾಖಲಿಸಲಾಗಿತ್ತು. .22 ರೈಫಲ್ ಮತ್ತು .32 ರಿವಾಲ್ವರ್ ಅನ್ನ ಸಲ್ಮಾನ್ ಖಾನ್ ಹೊಂದಿದ್ದರು. ಈ ಅಕ್ರಮ ಶಸ್ತ್ರಾಸ್ತ್ರಗಳನ್ನ ಜೋಧಪುರದ ಕಂಕಣಿ ಗ್ರಾಮದ ಅರಣ್ಯದಲ್ಲಿ ಕೃಷ್ಣಮೃಗ ಬೇಟೆಗೆ ಬಳಸಿದ್ದಾರೆ ಎಂದು ಪ್ರಕರಣದಲ್ಲಿ ಉಲ್ಲೇಖಿಸಲಾಗಿತ್ತು. ಆದರೆ, ಇವತ್ತಿನ ತೀರ್ಪಿನಲ್ಲಿ ಕೃಷ್ಣಮೃಗಕ್ಕೆ ತಾಕಿರುವ ಬುಲೆಟ್ ಮತ್ತು ಸಲ್ಲೂ ಬಳಿ ಇದ್ದ ಗನ್ನಿನ ಬುಲೆಟ್`ಗೂ ತಾಳೆ ಇಲ್ಲವೆಂಬ ಕಾರಣಕ್ಕೆ ಕೋರ್ಟ್ ಖುಲಾಸೆಗೊಳಿಸಿದೆ.