. ಸ್ವತಃ ಚಿತ್ರವನ್ನು ಸಲ್ಮಾನ್ ಖಾನ್ ಅವರೇ ನಿರ್ಮಿಸಿದ್ದರು. ಚಿತ್ರದ ಹಕ್ಕುಗಳನ್ನು ವಿತರಕರಿಗೆ ಮಾರಿದ ಕಾರಣ ಸಲ್ಮಾನ್'ಗೆ ಹೆಚ್ಚೇನು ನಷ್ಟವಾಗಲಿಲ್ಲ
ಮುಂಬೈ(ಆ.11): ಬಾಲಿವುಡ್ ನಟ ಸಲ್ಮಾನ್ ಖಾನ್ ಸೂಪರ್'ಸ್ಟಾರ್ ರಜಿನಿಕಾಂತ್ ರೀತಿ ಅನ್ನದಾತರಿಗೆ ಮಾದರಿಯಾಗಿದ್ದಾರೆ.
ಇತ್ತೀಚಿಗಷ್ಟೆ ಸಲ್ಮಾನ್ ಖಾನ್ ನಟನೆಯ ಹಿಂದಿ ಚಿತ್ರ ಟ್ಯೂ'ಬ್'ಲೈಟ್ ದೇಶಾದ್ಯಂತ ಬಿಡುಗಡೆಯಾಗಿತ್ತು. ಆದರೆ ಸತತ ಗೆಲುವುಗಳನ್ನು ಕಂಡ ಸಲ್ಲುವಿನ ಈ ಚಿತ್ರ ಬಾಕ್ಸ್ ಆಫೀಸ್'ನಲ್ಲಿ ಮಕಾಡೆ ಮಲಗಿತು. ಸ್ವತಃ ಚಿತ್ರವನ್ನು ಸಲ್ಮಾನ್ ಖಾನ್ ಅವರೇ ನಿರ್ಮಿಸಿದ್ದರು. ಚಿತ್ರದ ಹಕ್ಕುಗಳನ್ನು ವಿತರಕರಿಗೆ ಮಾರಿದ ಕಾರಣ ಸಲ್ಮಾನ್'ಗೆ ಹೆಚ್ಚೇನು ನಷ್ಟವಾಗಲಿಲ್ಲ. ಅದ್ಧೂರಿ ಗೆಲುವಿನ ನಿರೀಕ್ಷೆಯಲ್ಲಿದ್ದ ವಿತರಕರಿಗೆ ಮಾತ್ರ ಟ್ಯೂಬ್'ಲೈಟ್ ಚಿತ್ರವೂ ಭಾರಿ ನಷ್ಟವನ್ನು ಉಂಟು ಮಾಡಿತು.
ಪ್ರಮುಖ ವಿತರಕರಾದ ಶ್ರೀಯಾನ್ಸ್ ಹಿರಾವಾತ್ ಅವರಿಗೆ ಬರೋಬ್ಬರಿ 70 ಕೋಟಿ ನಷ್ಟ ಉಂಟಾಗಿತ್ತು. ವಿತರಿಕರಿಗೆ ಆದ ನಷ್ಟವನ್ನು ತುಂಬಿಕೊಡುವ ಸಲುವಾಗಿ ಸಲ್ಮಾನ್ ಶ್ರೀಯಾನ್ಸ್ ಅವರಿಗೆ ಕರೆ ಮಾಡಿ 32.5 ಕೋಟಿ ರೂ. ವಾಪಸ್ ನೀಡುವುದಾಗಿ ತಿಳಿಸಿದ್ದಾರೆ. ಇದೇ ವಿತರಕ ಶಾರೂಕ್ ಅಭಿನಯದ ಜಬ್ ಹ್ಯಾರಿ ಮೆಟ್ ಸೆಜಲ್ ಚಿತ್ರದಲ್ಲೂ ನಷ್ಟ ಅನುಭವಿಸಿದ್ದರು.
2000ರಲ್ಲಿ ಸೂಪರ್ ಸ್ಟಾರ್ ರಜಿನಿಕಾಂತ್ರ 'ಬಾಬಾ' ಚಿತ್ರ ಕೂಡ ವಿತರಕರಿಗೆ ಇದೇ ರೀತಿಯ ನಷ್ಟ ಉಂಟುಮಾಡಿತ್ತು. ರಜಿನಿ ವಿತರಕರ ನಷ್ಟವನ್ನು ತುಂಬಿಕೊಟ್ಟಿದ್ದರು.
