2015-16ನೇ ಸಾಲಿನಲ್ಲಿ ಸಲ್ಮಾನ್ ಖಾನ್ 32.2 ಕೋಟಿ ರು. ತೆರಿಗೆ ಪಾವತಿಸಿದ್ದರು. ಈ ವರ್ಷ ಅವರ ವಾರ್ಷಿಕ ಆದಾಯದಲ್ಲಿ ಶೇ.39ರಷ್ಟು ಏರಿಕೆಯಾಗಿದೆ.
ಮುಂಬೈ(ಮಾ.22): ಬಾಲಿವುಡ್ ನಟ ಸಲ್ಮಾನ್ ಖಾನ್ ಅತಿಹೆಚ್ಚು ಮುಂಗಡ ತೆರಿಗೆ ಪಾವತಿಸಿದ ಬಾಲಿವುಡ್ ನಟ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. 2016-17ನೇ ಹಣಕಾಸು ವರ್ಷದಲ್ಲಿ ಸಲ್ಮಾನ್ ಖಾನ್ 44.5 ಕೋಟಿ ರು. ಮುಂಗಡ ತೆರಿಗೆ ಪಾವತಿಸಿದ್ದಾರೆ. 29.5 ಕೋಟಿ ರು. ಮುಂಗಡ ತೆರಿಗೆ ಪಾವತಿಸಿದ ಅಕ್ಷಯ್ ಕುಮಾರ್ ಮತ್ತು 25.5 ಕೋಟಿ ರು. ಮುಂಗಡ ತೆರಿಗೆ ಪಾವತಿಸಿದ ಹೃತಿಕ್ ರೋಷನ್ ಅವರನ್ನು ಹಿಂದಿಕ್ಕಿದ್ದಾರೆ.
2015-16ನೇ ಸಾಲಿನಲ್ಲಿ ಸಲ್ಮಾನ್ ಖಾನ್ 32.2 ಕೋಟಿ ರು. ತೆರಿಗೆ ಪಾವತಿಸಿದ್ದರು. ಈ ವರ್ಷ ಅವರ ವಾರ್ಷಿಕ ಆದಾಯದಲ್ಲಿ ಶೇ.39ರಷ್ಟು ಏರಿಕೆಯಾಗಿದೆ.