ಸಲ್ಲುಗೆ ಬಿಗ್ ರಿಲೀಫ್; ಜೈಲಿನಿಂದ ಹೊರಬಂದ ಟೈಗರ್

First Published 7, Apr 2018, 3:02 PM IST
Salman Khan Gets Bail
Highlights

ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ 5 ವರ್ಷ ಶಿಕ್ಷಿಗೊಳಗಾಗಿರುವ ನಟ ಸಲ್ಮಾನ್ ಖಾನ್’ಗೆ ಜೋಧಪುರ ಸೆಷನ್ಸ್  ನ್ಯಾಯಾಲಯ  ಜಾಮೀನು ನೀಡಿದೆ.  

ನವದೆಹಲಿ (ಏ. 07): ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ 5 ವರ್ಷ ಶಿಕ್ಷಿಗೊಳಗಾಗಿರುವ ನಟ ಸಲ್ಮಾನ್ ಖಾನ್’ಗೆ ಜೋಧಪುರ ಸೆಷನ್ಸ್  ನ್ಯಾಯಾಲಯ  ಜಾಮೀನು ನೀಡಿದೆ.  

1998 ರಲ್ಲಿ ನಡೆದ ಕೃಷ್ಣಮೃಗ ಹತ್ಯಾ ಪ್ರಕರಣದಲ್ಲಿ ಸಲ್ಮಾನ್ ಖಾನ್’ಗೆ ಜೈಲು ಶಿಕ್ಷೆ ವಿಧಿಸಲಾಗಿದೆ. ನಿನ್ನೆ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ತೀರ್ಪನ್ನು ಇಂದು ಕಾಯ್ದಿರಿಸಿತ್ತು. ಇಂದು ಕಡೆಗೂ ಜಾಮೀನು ಸಿಕ್ಕಿ ಹೊರ ಬಂದಿದ್ದಾರೆ. 

ವಿಚಾರಣೆ ನಡೆಸಿದ ನ್ಯಾ. ರವೀಂದ್ರ ಕುಮಾರ್ ಜೋಶಿ ಅರ್ಜಿ ವಿಚಾರಣೆ ನಡೆಸಿ ಸಲ್ಮಾನ್ ಖಾನ್’ಗೆ ಜಾಮೀನು ಅರ್ಜಿ ನೀಡಿದ್ದಾರೆ. ಕೆಳ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸಲ್ಮಾನ್ ಖಾನ್ ಸೆಷನ್ ಕೋರ್ಟ್ ಮೆಟ್ಟಿಲೇರಿದ್ದರು. 

ಜೈಲಿನಿಂದ ಸಲ್ಮಾನ್ ಖಾನ್ ಹೊರ ಬರುತ್ತಿದ್ದಂತೆ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಆದರೆ ಇವರ ಜಾಮೀನಿನ ಸುದ್ದಿ ಕೇಳಿ ಬಿಷ್ಣೋಯಿ ಸಮುದಾಯ ಸಮಧಾನ ವ್ಯಕ್ತಪಡಿಸಿದೆ. ಹೈಕೋರ್ಟ್ ಮೆಟ್ಟಿಲೇರುವುದಾಗಿ ಹೇಳಿದ್ದಾರೆ. 

loader