ಸಲ್ಮಾನ್ ಖಾನ್ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ ಮಾಡಲಾಗಿದೆ. ನಾಳೆಗೆ ತೀರ್ಪನ್ನು ಕಾಯ್ದಿರಿಸಲಾಗಿದೆ.
ನವದೆಹಲಿ (ಏ. 06): ಸಲ್ಮಾನ್ ಖಾನ್ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ ಮಾಡಲಾಗಿದೆ. ನಾಳೆಗೆ ತೀರ್ಪನ್ನು ಕಾಯ್ದಿರಿಸಲಾಗಿದೆ.
ಜೋಧ್’ಪುರ ಸೆಷನ್ಸ್ ನ್ಯಾಯಾಲಯ ನಾಳೆಗೆ ವಿಚಾರಣೆಯನ್ನು ಮುಂದೂಡಿದೆ. ನಾಳೆ ಸಂಜೆವರೆಗೂ ಜೈಲಿನಲ್ಲೇ ಸಲ್ಮಾನ್ ಖಾನ್ ಇರಬೇಕಾಗುತ್ತದೆ. ಒಂದು ವೇಳೆ ನಾಳೆ ಬೇಲ್ ಸಿಕ್ಕರೆ ಸೋಮವಾರ ಹೊರ ಬರುವ ಸಾಧ್ಯತೆ ಇದೆ.
1998 ರಲ್ಲಿ ನಡೆದ ಕೃಷ್ಣಮೃಗ ಹತ್ಯಾ ಪ್ರಕರಣದಲ್ಲಿ ಸಲ್ಮಾನ್ ಖಾನ್’ಗೆ ಜೈಲು ಶಿಕ್ಷೆ ವಿಧಿಸಲಾಗಿದೆ. ನಾಳೆಗೆ ಅರ್ಜಿ ವಿಚಾರಣೆಯನ್ನು ಮುಂದೂಡಿರುವುದಕ್ಕೆ ಅವರ ಪರ ವಕೀಲ ಮಹೇಶ್ ಬೋರಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಲ್ಮಾನ್ಗೆ ಜಾಮೀನು ನೀಡದಂತೆ ಪ್ರಾಸಿಕ್ಯೂಷನ್ ಪ್ರತಿವಾದ ಮಂಡಿಸಿದ್ದಾರೆ. ಸಲ್ಮಾನ್ ಕೃಷ್ಣಮೃಗ ಬೇಟೆಯಾಡಿದ್ದನ್ನು ಪ್ರತ್ಯಕ್ಷದರ್ಶಿ ಕಂಡಿದ್ದಾರೆ. ಅಕ್ರಮ ಶಸ್ತ್ರಾಸ್ತ್ರ ಬಳಕೆಗೂ ಸಾಕ್ಷಿ ಇದೆ. ಕೃಷ್ಣ ಮೃಗ ಬೇಟೆ ವೇಳೆ ಸಲ್ಮಾನ್ ಖಾನ್ ಸ್ವತಃ ಜಿಪ್ಸಿ ಚಲಾಯಿಸುತ್ತಿದ್ದರು. ಸಲ್ಮಾನ್ ವಾಹನ ಚಲಾಯಿಸುತ್ತಿದ್ದನ್ನು ಪ್ರತ್ಯಕ್ಷದರ್ಶಿ ಕಂಡಿದ್ದಾರೆ. ಜಿಪ್ಸಿಯಿಂದ ಕೆಳಗಿಳಿದು ಕೃಷ್ಣಮೃಗ ಬೇಟೆಯಾಡಿದ್ದನ್ನು ಪ್ರತ್ಯಕ್ಷದರ್ಶಿ ಕಣ್ಣಾರೆ ನೋಡಿದ್ದಾರೆ. ಕೃಷ್ಣಮೃಗ ಬೇಟೆಗೆ ಸಲ್ಮಾನ್ ಖಾನ್ ಅಕ್ರಮ ಶಸ್ತ್ರಾಸ್ತ್ರ ಬಳಸಿದ್ದಾರೆ ಎಂದು ವಾದ ಮಂಡಿಸಿದ್ದಾರೆ. ವಶಕ್ಕೆ ಪಡೆದ ಶಸ್ತ್ರಾಸ್ತ್ರಗಳ ಬಗ್ಗೆ ಕೋರ್ಟ್ಗೆ ವಿವರ ಕೊಟ್ಟಿದ್ದಾರೆ.
