ನವದೆಹಲಿ(ಸೆ.30): ಕಲೆ ಮತ್ತು ಭಯೋತ್ಪಾದನೆಯನ್ನು ಒಂದೇ ರೀತಿಯಲ್ಲಿ ನೋಡಬಾರದು. ಪಾಕಿಸ್ತಾನಿ ಕಲಾವಿದರು ಕೇವಲ ಕಲಾವಿದರೆಷ್ಟೇ ಹೊರತು ಅವರೇನು ಭಯೋತ್ಪಾದಕರಲ್ಲ ಎಂದು ಬಾಲಿವುಡ್ ನಟ ಸಲ್ಮಾನ್ ಖಾನ್ ಹೇಳಿದ್ದಾರೆ.

ಪಾಕ್'ನಿಂದ ಉರಿ ದಾಳಿ ನಡೆದ ಬೆನ್ನಲ್ಲೇ ಮಹಾರಾಷ್ಟ್ರ ನವನಿರ್ಮಾಣ ಸೇನೆ(ಎಂಎನ್'ಎಸ್)ಯು ಕೂಡಲೇ ಪಾಕಿಸ್ತಾನಿ ಕಲಾವಿದರು ಭಾರತ ತೊರೆಯುವಂತೆ ಎಚ್ಚರಿಕೆ ನೀಡಿತ್ತು. ಈ ಸಂಬಂಧ ಪ್ರತಿಕ್ರಿಯಿಸಿರುವ ಸಲ್ಮಾನ್, ಉರಿಯಲ್ಲಿ ಭಾರತೀಯ ಸೈನಿಕರನ್ನು ಹತ್ಯೆ ಮಾಡಿದವರು ಭಯೋತ್ಪಾದಕರು. ಆದರೆ ಪಾಕಿಸ್ತಾನಿ ಕಲಾವಿದರು ಭಯೋತ್ಪಾದಕರಲ್ಲ. ಭಯೋತ್ಪಾದನೆ ಹಾಗೂ ಕಲೆಗೆ ಸಾಕಷ್ಟು ವ್ಯತ್ಯಾಸವಿದೆ. ಅವೆರಡೂ ಒಂದೇ ಅಲ್ಲ ಎಂದು ಹೇಳಿದ್ದಾರೆ.

ಭಾರತ ಹಾಗೂ ಪಾಕಿಸ್ತಾನಗಳಲ್ಲಿ ಶಾಂತಿ ನೆಲೆಸಲಿ ಎಂದು ಆಶಿಸುತ್ತೇನೆ ಎಂದು ಬಾಲಿವುಡ್ ನಟ ಹೇಳಿದ್ದಾರೆ.