ಇನ್ಫೋಸಿಸ್’ನ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಓ) ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ (ಎಂಡಿ) ಸಲೀಲ್ ಎಸ್ ಪಾರೇಖ್ ಅವರನ್ನು ಇನ್ಫೋಸಿಸ್ ಶನಿವಾರ ನೇಮಿಸಿದೆ.
ಬೆಂಗಳೂರು: ಇನ್ಫೋಸಿಸ್’ನ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಓ) ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ (ಎಂಡಿ) ಸಲೀಲ್ ಎಸ್ ಪಾರೇಖ್ ಅವರನ್ನು ಇನ್ಫೋಸಿಸ್ ಶನಿವಾರ ನೇಮಿಸಿದೆ.
ಸಲೀಲ್ ಪಾರೇಖ್ ಜ.2ರಂದು ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಹೇಳಲಾಗಿದೆ. ಮುಂದಿನ 5 ವರ್ಷಗಳ ಅವಧಿಗೆ ಅವರು ಆ ಹುದ್ದೆಯನ್ನು ನಿಭಾಯಿಸಲಿದ್ದಾರೆ ಎಂದು ಕಂಪನಿಯು ಹೇಳಿದೆ.
ಕ್ಯಾಪ್’ಜೆಮಿನಿ ಕಂಪನಿಯ ಎಕ್ಸಿಕ್ಯೂಟಿವ್ ಬೋರ್ಡ್’ನ ಸದಸ್ಯರಾಗಿರುವ ಪಾರೇಖ್, ಐಐಟಿ ಬಾಂಬೆಯಿಂದ ಏರೋನಾಟಿಕಲ್ ಇಂಜಿನಿಯರಿಂಗ್’ನಲ್ಲಿ ಪದವಿ ಪಡೆದಿದ್ದು, ಬಳಿಕ ಕಾರ್ನೆಲ್ ವಿವಿಯಿಂದ ಕಂಪ್ಯೂಟರ್ ಸೈನ್ಸ್’ನಲ್ಲಿ ಉನ್ನತ ಶಿಕ್ಷಣವನ್ನು ಪಡೆದಿದ್ದಾರೆ.
ನಂದನ್ ನೀಲೆಕಣಿಯವರು ಇನ್ಫೋಸಿಸ್’ನ ಅಧ್ಯಕ್ಷರಾಗಿ ಮುಂದುವರೆಯಲಿದ್ದು, ಹಂಗಾಮಿ ಸಿಇಓ ಆಗಿದ್ದ ಪ್ರವೀಣ್ ರಾವ್ ಮತ್ತೊಮ್ಮೆ ಚೀಫ್ ಆಪರೇಟಿಂಗ್ ಅಧಿಕಾರಿಯಾಗಿ ಮುಂದುವರೆಯಲಿದ್ದಾರೆ ಎಂದು ಹೇಳಲಾಗಿದೆ.
