ಹಗರಣ ಬಯಲಿಗೆಳೆಯಲು ಮುಂದಾದ ತಿವಾರಿಗೆ ಸಂಬಳ ತಡೆಹಿಡಿಯುವುದೂ ಸೇರಿದಂತೆ ನಾನಾ ರೀತಿಯಲ್ಲಿ ಒತ್ತಡ ಹೇರಲಾಗುತ್ತಿತ್ತೇ? ಸರಕಾರ ಯಾವ ಕಾರಣಕ್ಕೆ ಅನುರಾಗ್ ತಿವಾರಿಯವರ ಸಂಬಳ ತಡೆಹಿಡಿದಿತ್ತು? ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಿದೆ.

ಬೆಂಗಳೂರು(ಮೇ 20): ಮೃತ ಐಎಎಸ್ ಅಧಿಕಾರಿ ಅನುರಾಗ್ ತಿವಾರಿಗೆ ಕಳೆದ 5 ತಿಂಗಳಿನಿಂದ ಸಂಬಳವೇ ಆಗಿರಲಿಲ್ಲವಾ? ಅನುರಾಗ್ ತಿವಾರಿ ಕುಟುಂಬ ಸದಸ್ಯರೇ ಇಂಥದ್ದೊಂದು ಮಾಹಿತಿಯನ್ನು ಮಾಧ್ಯಮಗಳಿಗೆ ಬಹಿರಂಗಪಡಿಸಿದ್ದಾರೆ. ಹಗರಣ ಬಯಲಿಗೆಳೆಯಲು ಮುಂದಾಗಿದ್ದಕ್ಕೆ ಅನುರಾಗ್ ಜೀವ ಕಳೆದುಕೊಳ್ಳಬೇಕಾಯಿತು ಎಂದು ಕುಟುಂಬಸದಸ್ಯರು ಆರೋಪಿಸಿದ್ದಾರೆ.

ಕಳೆದ 5 ತಿಂಗಳಿನಿಂದ ಅನುರಾಗ್'ಗೆ ಸಂಬಳವೇ ಆಗಿರಲಿಲ್ಲ. ಸೋದರ ಮಯಂಕ್'ರಿಂದ ಕೆಲ ತಿಂಗಳಿನಿಂದ ಅನುರಾಗ್ ಹಣ ಪಡೆದಿದ್ದರು. ಅವರ ಬ್ಯಾಂಕ್ ಖಾತೆಯಲ್ಲಿ ಕೇವಲ 11 ಸಾವಿರ ರೂಪಾಯಿ ಇದೆ ಎನ್ನಲಾಗಿದೆ.

ಹಗರಣ ಬಯಲಿಗೆಳೆಯಲು ಮುಂದಾದ ತಿವಾರಿಗೆ ಸಂಬಳ ತಡೆಹಿಡಿಯುವುದೂ ಸೇರಿದಂತೆ ನಾನಾ ರೀತಿಯಲ್ಲಿ ಒತ್ತಡ ಹೇರಲಾಗುತ್ತಿತ್ತೇ? ಸರಕಾರ ಯಾವ ಕಾರಣಕ್ಕೆ ಅನುರಾಗ್ ತಿವಾರಿಯವರ ಸಂಬಳ ತಡೆಹಿಡಿದಿತ್ತು? ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಿದೆ.

ಕೆಲಸ ಮಾಡಿದ್ದು 65 ದಿನ ಮಾತ್ರ:
ಅನುರಾಗ್ ತಿವಾರಿಯವರು 5 ತಿಂಗಳ ಹಿಂದೆ, ಜ.4ರಂದು ಆಹಾರ ಇಲಾಖೆಯ ಅಧಿಕಾರಿಯಾಗಿ ಸೇರಿಕೊಂಡರಾದರೂ ಅಲ್ಲಿ ಕೆಲಸ ಮಾಡಿದ್ದು 65 ದಿನ ಮಾತ್ರ. ಈ ಮಧ್ಯೆ 13 ದಿನಗಳ ಕಾಲ ಪಂಜಾಬ್ ಚುನಾವಣೆಯಲ್ಲಿ ಕೆಲಸ ಮಾಡಿದರು. ಮಾರ್ಚ್ 5-15ವರೆಗೆ ಮತ್ತೊಮ್ಮೆ ಪಂಜಾಬ್ ಚುನಾವಣೆ ಮತ ಎಣಿಕೆ ಸೇವೆಗೆ ತೆರಳಿದ್ದರು. ಏಪ್ರಿಲ್ 7ರಂದು ಉತ್ತರಪ್ರದೇಶಕ್ಕೆ ತರಬೇತಿಗೆಂದು ತಿವಾರಿ ತೆರಳಿದ್ದರು. ಜ.4ರಿಂದ ಏ.7ರವರೆಗೆ ಅವರು ಆಹಾರ ಇಲಾಖೆಯಲ್ಲಿ ಕೆಲಸ ಮಾಡಿದ್ದು 65 ದಿನ ಮಾತ್ರ.