ಮಾಧ್ಯಮದವರ ಪ್ರಶ್ನೆಗೆ ಕೋಪಗೊಂಡು ಸೈಫ್ ಅಲಿ ಖಾನ್ ದುರ್ವರ್ತನೆ

First Published 5, Apr 2018, 11:24 AM IST
Saif Ali Khan Misbehaves With Driver on Arrival in Jodhpur
Highlights

ಇಂದು ಬಾಲಿವುಡ್ ನಟ ಸಲ್ಮಾನ್ ಖಾನ್ ಕೃಷ್ಣ ಮೃಗ ಭೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಿಚಾರಣೆ ನಡೆಯುತ್ತಿದೆ. ಜೋಧ್’ಪುರ ಕೋರ್ಟ್’ನಲ್ಲಿ ವಿಚಾರಣೆ ನಡೆಯುತ್ತಿದ್ದು, ಈ ನಿಟ್ಟಿನಲ್ಲಿ ಇಂದು ಕೋರ್ಟ್’ಗೆ ಹಾಜರಾಗಿದ್ದರು.

ಜೋಧ್’ಪುರ : ಇಂದು ಬಾಲಿವುಡ್ ನಟ ಸಲ್ಮಾನ್ ಖಾನ್ ಕೃಷ್ಣ ಮೃಗ ಭೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಯುತ್ತಿದೆ. ಜೋಧ್‌ಪುರ ಕೋರ್ಟ್‌ ಪ್ರಕರಣದಲ್ಲಿ ಸಲ್ಮಾನ್ ಖಾನ್ ದೋಷಿ ಎಂದು ತೀರ್ಪು ನೀಡಿದ್ದು, ಉಳಿದವರನ್ನು ದೋಷಮುಕ್ತಗೊಳಿಸಿದೆ. ಅಂತಿಮ ವಿಚಾರಣೆಗೆ ಹಾಜರಾಗಿದ್ದ ಸೈಫ್ ಆಲಿಖಾನ್ ಮಾಧ್ಯಮ ಮತ್ತು ಚಾಲಕನ ಮೇಲೆ ದುರ್ವರ್ತನೆ ತೋರಿದ್ದು, ಸದ್ದು ಮಾಡುತ್ತಿದೆ. 

ಸೋನಾಲಿ ಬೇಂದ್ರೆ, ಟಬು, ನೀಲಮ್, ಸೈಫ್ ಅಲಿ ಖಾನ್ ಬುಧವಾರವೇ ಜೋಧ್’ಪುರ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು.

ಈ ವೇಳೆ ನಟ ಸೈಫ್ ಅಲಿ ಖಾನ್  ಮಾಧ್ಯಮದವರೊಂದಿಗೆ  ದುರ್ನಡೆ ಪ್ರದರ್ಶಿಸಿದ್ದಾರೆ. ಅಲ್ಲದೇ ತಮ್ಮ ಡ್ರೈವರ್ ಜೊತೆಗೂ ಕೂಡ ದುರ್ವರ್ತನೆ ತೋರಿದ್ದಾರೆ. ಇಂತಹ ವಿಡಿಯೋ  ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವೈರಲ್ ಆಗುತ್ತಿದೆ.

loader