ಭರ್ಜರಿ ಹನಿಮೂನ್ ಮೂಡ್'ನಲ್ಲಿ ಜ್ಯಾಕ್-ಸಾಗರಿಕಾ ಜೋಡಿ; ಅಪರೂಪದ ಫೋಟೋಗಳು ನಿಮಗಾಗಿ
ನ.23ರಂದು ನಡೆದ ಸರಳ ಸಮಾರಂಭದಲ್ಲಿ ಜಹೀರ್ ಹಾಗೂ ಸಾಗರಿಕಾ ಜೋಡಿ ವಿವಾಹ ಜೀವನಕ್ಕೆ ಕಾಲಿಟ್ಟಿದ್ದರು. ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದರು. ಬಳಿಕ ಸ್ನೇಹಿತರು, ಆಪ್ತರು, ಸಂಬಂಧಿಕರಿಗೆ ಭರ್ಜರಿ ಪಾರ್ಟಿ ಕೊಡಿಸಿದ್ದರು.
ಮಾಲೆ(ಡಿ.09): ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದ ಮಾಜಿ ಕ್ರಿಕೆಟಿಗ ಜಹೀರ್ ಖಾನ್ ಹಾಗೂ ನಟಿ ಸಾಗರಿಕಾ ಘಾಟ್ಗೆ ದಂಪತಿ ಸದ್ಯ ಹನಿಮೂನ್ ಮೂಡ್‌ನಲ್ಲಿದ್ದು, ನೂತನ ಜೋಡಿ ಮಾಲ್ಡೀವ್ಸ್'ನಲ್ಲಿ ರಸಮಯ ಕ್ಷಣಗಳನ್ನು ಸವಿಯುತ್ತಿದ್ದಾರೆ.
ತಮ್ಮ ಇನ್'ಸ್ಟಾಗ್ರಾಮ್ ಖಾತೆಗಳಲ್ಲಿ ಇಬ್ಬರು ಮಾಲ್ಡೀವ್ಸ್'ನಲ್ಲಿ ಕ್ಲಿಕ್ಕಿಸಿಕೊಂಡ ಕೆಲ ಫೋಟೋಗಳನ್ನು ಅಪ್'ಲೋಡ್ ಮಾಡಿದ್ದು, ವೈರಲ್ ಆಗಿದೆ. ನ.23ರಂದು ನಡೆದ ಸರಳ ಸಮಾರಂಭದಲ್ಲಿ ಜಹೀರ್ ಹಾಗೂ ಸಾಗರಿಕಾ ಜೋಡಿ ವಿವಾಹ ಜೀವನಕ್ಕೆ ಕಾಲಿಟ್ಟಿದ್ದರು. ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದರು. ಬಳಿಕ ಸ್ನೇಹಿತರು, ಆಪ್ತರು, ಸಂಬಂಧಿಕರಿಗೆ ಭರ್ಜರಿ ಪಾರ್ಟಿ ಕೊಡಿಸಿದ್ದರು.
ಇದೀಗ ಸದ್ದಿಲ್ಲದೇ ಈ ಜೋಡಿ ಮಾಲ್ಡೀವ್ಸ್'ಗೆ ಹಾರಿದ್ದು, ಜೀವನದ ಅದ್ಭುತ ಕ್ಷಣಗಳನ್ನು ಕಳೆಯುತ್ತಿದ್ದಾರೆ.
ನವಜೋಡಿಯ ಅಪರೂಪದ ಫೋಟೋಗಳು ನಿಮಗಾಗಿ...