ಸಚಿವ ಅನಂತ್ ಕುಮಾರ್ ಅವರ ನಿಧನದಿಂದ ಕೇಂದ್ರದಲ್ಲಿ ತೆರವಾಗಿದ್ದ   ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ಜವಾಬ್ದಾರಿಯನ್ನು ಕೇಂದ್ರ ಅಂಕಿ​-ಅಂಶ ಮತ್ತು ಯೋಜನಾ ಅನುಷ್ಠಾನ ಸಚಿವ ಡಿ.ವಿ. ಸದಾನಂದಗೌಡ ವಹಿಸಿಕೊಂಡಿದ್ದಾರೆ.

ನವದೆಹಲಿ : ಕೇಂದ್ರ ಸಚಿವ ಅನಂತ ಕುಮಾರ್‌ ನಿಧನದಿಂದ ತೆರವಾಗಿದ್ದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ಜವಾಬ್ದಾರಿಯನ್ನು ಕೇಂದ್ರ ಅಂಕಿ​-ಅಂಶ ಮತ್ತು ಯೋಜನಾ ಅನುಷ್ಠಾನ ಸಚಿವ ಡಿ.ವಿ. ಸದಾನಂದಗೌಡ ಅವರು ಬುಧವಾರ ವಹಿಸಿಕೊಂಡಿದ್ದಾರೆ. 

ಅನಂತ್‌ ಕುಮಾರ್‌ ನಿಧನದ ಹಿನ್ನೆಲೆಯಲ್ಲಿ ಅವರ ಬಳಿಯಿದ್ದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯನ್ನು ಕನ್ನಡಿಗರೇ ಆದ ಸದಾನಂದ ಗೌಡ ಅವರಿಗೆ ವಹಿಸಿ ರಾಷ್ಟ್ರಪತಿಗಳು ಮಂಗಳವಾರ ನಿರ್ದೇಶನ ನೀಡಿದ್ದರು. 

ಅದರಂತೆ ಬುಧವಾರ ಶಾಸ್ತ್ರಿ ಭವನದಲ್ಲಿರುವ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದಲ್ಲಿ ಸದಾನಂದ ಗೌಡ ಅವರು ಪದಗ್ರಹಣ ಮಾಡಿದರು. ರಾಜ್ಯ ಸಚಿವ ಮನ್ಸೂಖ್‌ ಎಲ್ ಮಂಡಾವಿಯಾ ಸೇರಿ ಸಚಿವಾಲಯದ ಹಿರಿಯ ಅಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು.

ನಂತರ ಟ್ವೀಟ್‌ ಮಾಡಿರುವ ಸದಾನಂದ ಗೌಡ ಅವರು, ಅನಂತ್‌ ಕುಮಾರ್‌ ಅವರ ಕೆಲಸಗಳನ್ನು ಮುಂದುವರಿಸಿಕೊಂಡು ಹೋಗುವುದಾಗಿ ತಿಳಿಸಿದ್ದಾರೆ.

Scroll to load tweet…