ಸ್ಕೇರೆಡ್ ಗೇಮ್ಸ್ ಚಿತ್ರದ ವಿವಾದಿತ ದೃಶ್ಯಗಳ ಬಗ್ಗೆ ನಟಿ ರಾಜಶ್ರೀ ಕೋಪ ಸಿನಿಮಾದಲ್ಲಿನ ಅಭಿನಯ ಪಾತ್ರಕ್ಕಷ್ಟೆ ಸೀಮಿತ

ನವದೆಹಲಿ[ಜು.20]: ಸಿನಿಮಾಗಳ ಸೆಕ್ಸ್ ದೃಶ್ಯಗಳು ಹಾಗೂ ಅದಕ್ಕೆ ಸಂಬಂಧಪಟ್ಟ ಹೇಳಿಕೆಗಳು ಆಗಾಗ ವಿವಾದ ಪಡೆದುಕೊಳ್ಳುತ್ತಿರುತ್ತವೆ. ನಟಿಯೊಬ್ಬಳ ಹೇಳಿಕೆ ಕೂಡ ಅದೇ ಸ್ವರೂಪ ತಾಳಿದೆ.

ಬಾಲಿವುಡ್ ನಟಿ ರಾಜಶ್ರೀ ದೇಶಪಾಂಡೆ ಇತ್ತೀಚಿಗೆ ಬಿಡುಗಡೆಯಾದ ನೆಟ್ ಫ್ಲಿಕ್ಸ್ ವೆಬ್ ಸೀರೀಸ್ ಸ್ಕೇರೆಡ್ ಗೇಮ್ಸ್ ಚಿತ್ರ ಸರಣಿಯಲ್ಲಿ ನಟಿಸಿದ್ದಾರೆ. ಈ ಅಂತರ್ಜಾಲ - 8 ವೆಬ್ ಸರಣಿಯಲ್ಲಿ ರಾಜಶ್ರೀ ಅವರು ಗ್ಯಾಂಗ್ ಸ್ಟಾರ್ ನವಾಝುದ್ದೀನ್ ಸಿದ್ದಿಕಿ ಪತ್ನಿಯಾಗಿ ಅಭಿನಯಿಸಿದ್ದು ಇದರಲ್ಲಿನ ಕೆಲವು ದೃಶ್ಯಗಳು ವಿವಾದ ಪಡೆದುಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಚರ್ಚೆಯಾಗುತ್ತಿದೆ.

ತಾವು ಅಭಿನಯಿಸಿರುವ ದೃಶ್ಯದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ರಾಜಶ್ರೀ, ಸಂಬಂಧಪಟ್ಟ ಸೆಕ್ಸ್ ದೃಶ್ಯಗಳನ್ನು ಪ್ರೇಕ್ಷಕರು ಗ್ರಹಿಸದಿದ್ದರೆ ಅವರು ಪ್ರೌಢರಾಗಿಲ್ಲ ಎಂದು ಅರ್ಥ. ಸೆಕ್ಸ್ ಒಂದು ಸುಂದರವಾದ ವಿಷಯ. ಆದರೆ ಜನರು ಇದರ ಬಗ್ಗೆ ತಪ್ಪಾದ ಅಭಿಪ್ರಾಯವನ್ನೇ ಹೊಂದಿರುತ್ತಾರೆ. ಸಿನಿಮಾದಲ್ಲಿ ನಾನು ನನ್ನ ಗಂಡನನ್ನು ಪ್ರೀತಿಸಿದರೆ ಅದು ಪಾತ್ರದ ವಿಷಯವೇ ಹೊರತು ಮತ್ತೇನಿಲ್ಲ ಎಂದಿದ್ದಾರೆ.

ಕಳೆದ ವರ್ಷ ರಾಜಶ್ರೀ ನಟಿಸಿದ ಸೆಕ್ಸಿ ದುರ್ಗಾ ಎಂಬ ಮಲಯಾಳಿ ಚಿತ್ರದಲ್ಲಿನ ಕೆಲವು ದೃಶ್ಯಗಳು ಹಾಗೂ ಸಂಭಾಷಣೆಗಳು ಕೂಡ ಪ್ರೇಕ್ಷಕರಿಂದ ವಿರೋಧ ವ್ಯಕ್ತವಾಗಿತ್ತು. ನಟಿ ಮಾತ್ರ ತಾವು ಮಾಡಿದ ಪಾತ್ರ ಸರಿ ಎಂದು ಪಾತ್ರಕ್ಕೆ ತಕ್ಕಂತೆ ನಟಿಸಿರುವುದಾಗಿ ಸಮರ್ಥಿಸಿಕೊಂಡಿದ್ದರು. 

ಈ ಸುದ್ದಿಯನ್ನು ಓದಿ: ಶೀರೂರು ಶ್ರೀಗಳು ವಿಧಿವಶ : ಕಂಬನಿ ಮಿಡಿಯುತ್ತಿರುವ ಗೋವು, ಸಾಕು ನಾಯಿ