ಅಭಿಯಾನಕ್ಕೆ ಈಗಾಗಲೇ ಸಚಿನ್ ತೆಂಡೂಲ್ಕರ್ ಅವರು ಕೇರಳ ಸರ್ಕಾರದ ವತಿಯಿಂದ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ.

ತಿರುವನಂತಪುರ(ನ.07): ಮದ್ಯಪಾನ ಹಾಗೂ ಮಾದಕ ವಸ್ತುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಕೇರಳ ಸರ್ಕಾರ ಆರಂಭಿಸಲಿರುವ ‘ವಿಮುಕ್ತಿ’ ಹೆಸರಿನ ಜನಜಾಗೃತಿ ಆಂದೋಲನದ ಉದ್ಘಾಟನಾ ಸಮಾರಂಭ ನ. 20ರಂದು ನಡೆಯಲಿದ್ದು ಈ ಸಮಾರಂಭಕ್ಕೆ ಸಚಿನ್ ತೆಂಡೂಲ್ಕರ್ ಆಗಮಿಸಲಿದ್ದಾರೆ.

ಈ ಅಭಿಯಾನಕ್ಕೆ ಈಗಾಗಲೇ ಸಚಿನ್ ತೆಂಡೂಲ್ಕರ್ ಅವರು ಕೇರಳ ಸರ್ಕಾರದ ವತಿಯಿಂದ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ಅವರು ಉದ್ಘಾಟನಾ ಸಮಾರಂಭಕ್ಕೆ ಹಾಜರಾಗಲಿದ್ದಾರೆಂದು ಕೇರಳದ ಅಬಕಾರಿ ಸಚಿವ ಟಿ.ಪಿ. ರಾಮಕೃಷ್ಣನ್ ತಿಳಿಸಿದ್ದಾರೆ.