ಪ್ರೊ ಕಬಡ್ಡಿ ಲೀಗ್‌ನ 5ನೇ ಆವೃತ್ತಿಗೆ ಹೊಸದಾಗಿ 4 ತಂಡಗಳನ್ನು ಸೇರ್ಪಡೆಗೊಳಿಸಲಾಗಿದ್ದು, ಮಾಜಿ ಕ್ರಿಕೆಟಿಗ ಸಚಿನ್‌ ತೆಂಡುಲ್ಕರ್‌ ಚೆನ್ನೈ ತಂಡದ ಸಹ ಮಾಲೀಕತ್ವ ಪಡೆದುಕೊಂಡಿದ್ದಾರೆ.

ಮುಂಬೈ(ಮೇ.13): ಪ್ರೊ ಕಬಡ್ಡಿ ಲೀಗ್‌ನ 5ನೇ ಆವೃತ್ತಿಗೆ ಹೊಸದಾಗಿ 4 ತಂಡಗಳನ್ನು ಸೇರ್ಪಡೆಗೊಳಿಸಲಾಗಿದ್ದು, ಮಾಜಿ ಕ್ರಿಕೆಟಿಗ ಸಚಿನ್‌ ತೆಂಡುಲ್ಕರ್‌ ಚೆನ್ನೈ ತಂಡದ ಸಹ ಮಾಲೀಕತ್ವ ಪಡೆದುಕೊಂಡಿದ್ದಾರೆ.

ಇನ್ನುಳಿದಂತೆ ಗುಜರಾತ್‌, ಉತ್ತರ ಪ್ರದೇಶ ಹಾಗೂ ಹರ್ಯಾಣ ತಂಡಗಳು ಈ ಬಾರಿ ಪರ್ದಾಪಣೆ ಮಾಡು​ತ್ತಿವೆ. ಅದಾನಿ ಸಂಸ್ಥೆ ಗುಜರಾತ್‌ ತಂಡ ಖರೀದಿಸಿದರೆ, ಜೆಎಸ್‌ಡಬ್ಲ್ಯೂ ಸಂಸ್ಥೆ ಹರ್ಯಾಣ ತಂಡವನ್ನು ಖರೀದಿಸಿದೆ. ಜಿಎಂಆರ್‌ ಸಂಸ್ಥೆ ಉತ್ತರ ಪ್ರದೇಶ ತಂಡದ ಮಾಲೀಕತ್ವ ಪಡೆದು​ಕೊಂಡಿದೆ. ಇದರೊಂದಿಗೆ ಈ ಆವೃತ್ತಿಯಲ್ಲಿ ಒಟ್ಟು ತಂಡಗಳ ಸಂಖ್ಯೆ 12ಕ್ಕೇರಿದೆ. ಈ ಬಾರಿ ಜುಲೈನಿಂದ ಅಕ್ಟೋಬರ್‌ ವರೆಗೂ 13 ವಾರಗಳ ಕಾಲ ಒಟ್ಟು 130ಕ್ಕೂ ಹೆಚ್ಚು ಪಂದ್ಯಗಳು ನಡೆಯಲಿವೆ.

ಸಚಿನ್‌ ಖರೀದಿಸಿದ 3ನೇ ಫ್ರಾಂಚೈಸಿ: ಇಂಡಿಯನ್‌ ಸೂಪರ್‌ ಲೀಗ್‌ನಲ್ಲಿ ಕೊಚ್ಚಿ ಬ್ಲಾಸ್ಟ​ರ್‍ಸ್ ತಂಡವನ್ನು ಖರೀದಿಸಿದ್ದ ಸಚಿನ್‌, ಬ್ಯಾಡ್ಮಿಂಟನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಬೆಂಗಳೂರು ಬ್ಲಾಸ್ಟ​ರ್‍ಸ್ ತಂಡದ ಮಾಲೀಕತ್ವ ಪಡೆದುಕೊಂಡಿದ್ದರು. ಇದೀಗ ಪ್ರೊ ಕಬಡ್ಡಿ ಯಲ್ಲಿ ಚೆನ್ನೈ ತಂಡವನ್ನೂ ಖರೀದಿಸಿದ್ದಾರೆ.