ನಗರವನ್ನು ಸುಂದರ ಮತ್ತು ಆರೋಗ್ಯವಂತವಾಗಿರಿಸಲು ನಗರ ಮತ್ತು ನಗರದ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿಟ್ಟುಕೊಳ್ಳಿ ಎಂದು ಖ್ಯಾತಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಮಂಗಳವಾರ ಜನರನ್ನು ಒತ್ತಾಯಿಸಿದರು.

ಮುಂಬೈ: ನಗರವನ್ನು ಸುಂದರ ಮತ್ತು ಆರೋಗ್ಯವಂತವಾಗಿರಿಸಲು ನಗರ ಮತ್ತು ನಗರದ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿಟ್ಟುಕೊಳ್ಳಿ ಎಂದು ಖ್ಯಾತಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಮಂಗಳವಾರ ಜನರನ್ನು ಒತ್ತಾಯಿಸಿದರು.

ಬಾಂದ್ರಾದಲ್ಲಿ ಮಂಗಳವಾರ ಮುಂಜಾನೆ ತಮ್ಮ ಪುತ್ರ ಅರ್ಜುನ್‌ರೊಂದಿಗೆ ಪೊರಕೆ ಹಿಡಿದು ರಸ್ತೆಯನ್ನು ಸ್ವಚ್ಛಗೊಳಿಸಿದ ಸಚಿನ್, ಸ್ವಚ್ಛತೆಯ ಸಂದೇಶವನ್ನು ಸಾರುವ ಮೂಲಕ ಕೇಂದ್ರದ ‘ಸ್ವಚ್ಛತಾ ಹೀ ಸೇವಾ’ ಅಭಿಯಾನಕ್ಕೆ ಕೈಜೋಡಿಸಿದರು.

Happy to see wide scale participation by youngsters, including Arjun in #SwachhataHiSeva. Our Yuva Shakti will make a Swachh Bharat. https://t.co/m60mYvsY7w

Scroll to load tweet…

ಮೋದಿ ರೀ ಟ್ವೀಟ್: ಸ್ವಚ್ಛ ಹೀ ಸೇವಾ ಅಭಿಯಾನದ ಬಗ್ಗೆ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಮಾಡಿರುವ ಟ್ವೀಟ್ ಅನ್ನು ಪ್ರಧಾನಿ ನರೇಂದ್ರ ಮೋದಿ ರೀಟ್ವೀಟ್ ಮಾಡಿ, ಸ್ವಚ್ಛ ಭಾರತ ಅಭಿಯಾನದಲ್ಲಿ ಯುವಕರು ಪಾಲ್ಗೊಳ್ಳುತ್ತಿರುವುದು ಖಷಿಯ ವಿಚಾರವಾಗಿದೆ ಎಂದು ಹೇಳಿದ್ದಾರೆ. ಮೋದಿ ಅವರ ರೀ ಟ್ವೀಟ್‌ಗೆ ಟ್ವೀಟರ್‌ನಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಬೆಂಗಳೂರಲ್ಲಿ ಕೆರೆ ಸ್ವಚ್ಛಗೊಳಿಸಿದ ಹಾಕಿ ಆಟಗಾರರು: ಇದೇ ವೇಳೆ ಭಾರತ ಹಾಕಿ ತಂಡದ ಆಟಗಾರರು ಸಹ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಬೆಂಗಳೂರಿನ ಕುಂಬಳಗೋಡು ಸಮೀಪ ಇರುವ ಕೆರೆಯೊಂದನ್ನು ಸ್ವಚ್ಛಗೊಳಿಸಿ, ಸ್ಥಳೀಯರಲ್ಲಿ ಜಾಗೃತಿ ಮೂಡಿಸಿದರು.