ಜೈಪುರ : ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಕಾಂಗ್ರೆಸ್ ನಲ್ಲಿ ರಾಜೀನಾಮೆ ಪರ್ವ ಆರಂಭವಾಗಿದ್ದು, ಎಐಸಿಸಿ ಹುದ್ದೆ ತೊರೆಯಲು ಬದ್ಧರಾಗಿದ್ದಾಗಿ  ಹೇಳಿದ್ದರು. ಇದೀಗ ರಾಜಸ್ಥಾನ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಕೂಡ ಹುದ್ದೆ ತೊರೆಯುವ ಸಾಧ್ಯತೆಯ ಬಗ್ಗೆ ಮಾತುಗಳು ಕೇಳಿ ಬಂದಿದೆ.  

ಒಂದು ವೇಳೆ ರಾಹುಲ್ ಅಧ್ಯಕ್ಷ ಸ್ಥಾನ ತೊರೆದಲ್ಲಿ ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಸಚಿನ್ ಪೈಲಟ್ ತಮ್ಮ ಬೆಂಬಲಿಗ ಶಾಸಕರೊಂದಿಗೆ ಎರಡೂ ಸ್ಥಾನದಿಂದ ಹೊರನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. 

2014ರಲ್ಲಿ ಸಚಿನ್ ಪೈಲಟ್ ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದು, ಕಳೆದ ವರ್ಷ ನಡೆದ ರಾಜ್ಯ ವಿಧಾನಸಭಾ ಚುನಾವಣೆಯ ಬಳಿಕ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದರು. 

ಫಾರೂಕ್ ಅಳಿಯ, ಸೇನಾಧಿಕಾರಿ, ಕಿರಿಯ ಎಂಪಿ ಪೈಲಟ್ ಜೀವನಗಾಥೆಯಿದು!

ಲೋಕಸಭಾ ಚುನಾವಣೆಯಲ್ಲಿ ರಾಜಸ್ಥಾನದಲ್ಲಿ ಕಾಂಗ್ರೆಸ್ ಒಂದು ಸ್ಥಾನವನ್ನು ಗೆಲ್ಲುವಲ್ಲಿ ವಿಫಲವಾಗಿದ್ದು, ಇದರಿಂದ ಇಲ್ಲಿ ಅಸ್ತಿತ್ವದಲ್ಲಿ ಇರುವ ರಾಜ್ಯ ಸರ್ಕಾರದ ಮೇಲೂ ಪರಿಣಾಮವಾಗಿದೆ. 

ಸದ್ಯ ರಾಜ್ಯದಲ್ಲಿ 100 ಸೀಟುಗಳನ್ನು ಹೊಂದಿರುವ ಕಾಂಗ್ರೆಸ್ 6 ಬಿಎಸ್ ಪಿ, 12 ಪಕ್ಷೇತರ ಅಭ್ಯರ್ಥಿಗಳ ಬೆಂಬಲ ಪಡೆದು ಸರ್ಕಾರ ರಚಿಸಿದ್ದು, ಅನುಗಾಡುವ ಸ್ಥಿತಿ ಎದುರಾಗಿದೆ. 

ರಾಜಸ್ಥಾನ ಕಾಂಗ್ರೆಸ್ ಕೆಲ ನಾಯಕರೂ ಕೂಡ ಪೈಲಟರ್ ರಾಜೀನಾಮೆ ಬಗ್ಗೆ ಹೇಳಿಕೆ ನೀಡಿದ್ದು, ಅಧಿಕೃತ ಮೂಲಗಳು ಮಾತ್ರ ಖಚಿತಪಡಿಸಿಲ್ಲ.