ಪ್ಲಾಟ್​ ಹಾಗೂ ಸೈಟ್​ ನೀಡುವುದಾಗಿ ಕೋಟ್ಯಾಂತರ ರೂಪಾಯಿ ವಸೂಲಿ ಮಾಡಿ ವಂಚಿಸಿರುವ ಸಚಿನ್​​ ನಾಯಕ್ ಕೆಲ ಗ್ರಾಹಕರ ಮೇಲೆ ಹಲ್ಲೆ ಕೂಡ ಮಾಡಿಸಿದ್ದಾನೆ. ಇತ್ತ ಹಣವನ್ನೂ ಕಳೆದುಕೊಂಡು, ಸಚಿನ್​ ನಾಯಕ್​ ಚೇಲಾಗಳಿಂದ ಹಲ್ಲೆಗೊಳಗಾದರೂ, ಅಮಾಯಕರಿಗೆ ಹಣ ಮಾತ್ರ ಸಿಗುತ್ತಿಲ್ಲ. 420 ಸಚಿನ್​​ ನಾಯಕ್​​ನಿಂದ ನೊಂದ ಮತ್ತೊಂದು ಕುಟುಂಬದ ಸ್ಟೋರಿ ಇಲ್ಲಿದೆ.

ಬೆಂಗಳೂರು(ಜ.27): ಪ್ಲಾಟ್​ ಹಾಗೂ ಸೈಟ್​ ನೀಡುವುದಾಗಿ ಕೋಟ್ಯಾಂತರ ರೂಪಾಯಿ ವಸೂಲಿ ಮಾಡಿ ವಂಚಿಸಿರುವ ಸಚಿನ್​​ ನಾಯಕ್ ಕೆಲ ಗ್ರಾಹಕರ ಮೇಲೆ ಹಲ್ಲೆ ಕೂಡ ಮಾಡಿಸಿದ್ದಾನೆ. ಇತ್ತ ಹಣವನ್ನೂ ಕಳೆದುಕೊಂಡು, ಸಚಿನ್​ ನಾಯಕ್​ ಚೇಲಾಗಳಿಂದ ಹಲ್ಲೆಗೊಳಗಾದರೂ, ಅಮಾಯಕರಿಗೆ ಹಣ ಮಾತ್ರ ಸಿಗುತ್ತಿಲ್ಲ. 420 ಸಚಿನ್​​ ನಾಯಕ್​​ನಿಂದ ನೊಂದ ಮತ್ತೊಂದು ಕುಟುಂಬದ ಸ್ಟೋರಿ ಇಲ್ಲಿದೆ.

ಟಿಜಿಎಸ್​, ಡ್ರೀಮ್ಸ್​ ಜಿಕೆ ಕಂಪನಿಗಳ ಮೂಲಕ ಸಾವಿರಾರು ಜನರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಸಚಿನ್​ ನಾಯಕ್​ ಪುಂಡಾಟಿಕೆಗೆ ಕೊನೆಯಿಲ್ಲದಂತಾಗಿದೆ. ಸಚಿನ್​ ನಾಯಕ್​ನ ಬಣ್ಣದ ಮಾತಿಗೆ ಬೆರಗಾಗಿ ಲಕ್ಷ ಲಕ್ಷ ರೂಪಾಯಿ ಕೊಟ್ಟು ಸಾವಿರಾರು ಮಂದಿ ಕೈಸುಟ್ಟುಕೊಂಡಿದ್ದಾರೆ. ಸೈಟ್​​ ಅಥವಾ ಮನೆ ಸಿಗಲ್ಲ ಅಂತ ಗೊತ್ತಾದ ಕೂಡಲೇ ಹಣ ಹಿಂದಿರುಗಿಸುವಂತೆ ಕೇಳಲು ಹೋದ ಜನರಿಗೆ ಸಚಿನ್​ ನಾಯಕ್​​ ಗೂಂಡಾಗಳನ್ನು ಬಿಟ್ಟು ಹಲ್ಲೆ ನಡೆಸಿದ್ದಾನೆ.

ರಾಜಾಜಿನಗರ ನಿವಾಸಿಯಾಗಿರುವ ಇವರು ಕೆಂಗೇರಿ ಬಳಿ ಸೈಟ್​ ಖರೀದಿಗಾಗಿ ನಾಗರತ್ಮಮ್ಮ ಎಂಬವರು ಡ್ರೀಮ್ಸ್​ ಜಿ.ಕೆ ಕಂಪನಿಗೆ 5 ಲಕ್ಷ ರೂಪಾಯಿ ನೀಡಿದ್ದರು. ಹಣ ನೀಡಿದ ನಂತರ ಸಚಿನ್​ ನಾಯಕ್​​ ಸರ್ಕಾರಿ ಭೂಮಿ ತೋರಿಸಿ ವಂಚಿಸುತ್ತಿದ್ದಾನೆ ಎಂದು ಗೊತ್ತಾಗುತ್ತಿದ್ದಂತೆ ಹಣ ಹಿಂದಿರುಗಿಸುವಂತೆ ಕಚೇರಿಗೆ ಅಲೆದಾಡಿದ್ದಾರೆ. ಇಂದು ಬಾ, ನಾಳೆ ಬಾ ಎಂದು ಅಲೆದಾಡಿಸಿದ ಸಿಬ್ಬಂದಿ , ಕೊನೆಗೆ ಎಲ್ಲರೂ ಸೇರಿ ನಾಗರತ್ನಮ್ಮ ಹಾಗೂ ಅವರ ಮಕ್ಕಳ ಮೇಲೆ ಹಲ್ಲೆ ನಡೆಸಿದ್ದಾರೆ.

ಇನ್ನು ಈ ಬಗ್ಗೆ ದೂರು ನೀಡಲು ಠಾಣೆಗೆ ತೆರಳಿದರೆ ಪೊಲೀಸರು ದೂರು ಪಡೆಯದೇ ಹಲ್ಲೆಗೊಳಗಾದವರನ್ನೇ ಹೆದರಿಸಿ ಕಳುಹಿಸಿದ್ದಾರೆ ಎಂದು ನಾಗರತ್ನಮ್ಮ ಆರೋಪಿಸಿದ್ದಾರೆ. ಸಚಿನ್​​ ನಾಯ್ಕ್​​ ಕಚೇರಿಯಲ್ಲಿ ಹಲ್ಲೆ ನಡೆಸಿದ ದೃಶ್ಯಗಳು ಸಿಸಿ ಕ್ಯಾಮರದಲ್ಲಿ ಸೆರೆಯಾಗಿದ್ದರೂ, ಅವುಗಳನ್ನು ಪೊಲೀಸರಿಗೆ ನೀಡದೇ ನಾಶ ಮಾಡಿದ್ದಾನೆ. ಅಲ್ಲದೆ, ನಾಗರತ್ನಮ್ಮ ಅವರ ಮಗನ ಮೊಬೈಲ್​​ ಕಿತ್ತುಕೊಂಡ ಸಿಬ್ಬಂದಿ ಫೂಟೇಜ್​ ಡಿಲೀಟ್​ ಮಾಡಿದ್ದಾರಂತೆ. ಹಣ ಕಳೆದುಕೊಂಡಿದ್ದಲ್ಲದೆ, ಆತನಿಂದ ಹಲ್ಲೆಗೆ ಒಳಗಾದರೂ ನ್ಯಾಯ ಸಿಗುತ್ತಿಲ್ಲ ಎನ್ನುವುದು ನಾಗರತ್ನಮ್ಮ ಕುಟುಂಬಸ್ಥರ ಅಳಲು.