ಸಚಿನ್ ನಾಯ್ಕ್ ವಿರುದ್ಧ ಬೆಂಗಳೂರಿನಲ್ಲಿ ಹಲವು ವಂಚನೆ ಪ್ರಕರಣಗಳು ದಾಖಲಾಗಿವೆ. ಈತನ ವಂಚನೆ ಬಗ್ಗೆ ಸುವರ್ಣನ್ಯೂಸ್ ಕೆಲ ದಿನಗಳ ಹಿಂದೆ ವಿಸ್ತೃತ ವರದಿ ಪ್ರಸಾರ ಮಾಡಿತ್ತು.
ಬೆಂಗಳೂರು(ಜ. 15): ಇಲ್ಲಿಯ ಫ್ರೀಡಂಪಾರ್ಕ್'ನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ವಂಚನೆಯ ಆರೋಪಿ ಸಚಿನ್ ನಾಯ್ಕ್ ವಿರುದ್ಧ ತೀವ್ರ ಪ್ರತಿಭಟನೆ ನಡೆಸಲಾಗ್ತಿದೆ. ಸಚಿನ್ ನಾಯ್ಕ್'ನಿಂದ ವಂಚನೆಗೊಳಗಾದವರು ಕರವೇ ಸ್ವಾಭಿಮಾನಿ ಬಣದ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಡ್ರೀಮ್ಸ್ ಜಿಕೆ, ಟಿಜಿಎಸ್ ಕಂಪನಿ ಹೆಸರಿನಲ್ಲಿ ನೂರಾರು ಕೋಟಿ ಹಣ ವಂಚಿಸಿರುವ ಸಚಿನ್ ನಾಯ್ಕ್ ವಿರುದ್ಧ ಕ್ರಮ ಕೈಗೊಳ್ಳಬೇಕು, ನ್ಯಾಯ ಒದಗಿಸಬೇಕೆಂದು ಆಗ್ರಹಿಸಿರುವ ಸಂತ್ರಸ್ತರು, ಗಾಂಧೀಜಿ ಫೋಟೊ ಹಿಡಿದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಚಿನ್ ನಾಯ್ಕ್ ವಿರುದ್ಧ ಬೆಂಗಳೂರಿನಲ್ಲಿ ಹಲವು ವಂಚನೆ ಪ್ರಕರಣಗಳು ದಾಖಲಾಗಿವೆ. ಈತನ ವಂಚನೆ ಬಗ್ಗೆ ಸುವರ್ಣನ್ಯೂಸ್ ಕೆಲ ದಿನಗಳ ಹಿಂದೆ ವಿಸ್ತೃತ ವರದಿ ಪ್ರಸಾರ ಮಾಡಿತ್ತು.