ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಆರಂಭ! ಮಹಿಳೆಯರನ್ನು ತಡೆಯುವಲ್ಲಿ ಯಶಸ್ವಿಯಾದ ಪ್ರತಿಭಾನಾಕಾರರು! ದೇವಸ್ಥಾನದಿಂದ ಇನ್ನೂ 20 ಕಿ.ಮೀ. ದೂರದಲ್ಲೇ ಇದ್ದಾರೆ ಮಹಿಳೆಯರು! ರಣಾಂಗಣವಾಗಿ ಪರಿವರ್ತನೆಗೊಂಡ ನೀಲಕ್ಕಲ್ ಗ್ರಾಮ

ನೀಲಕ್ಕಲ್(ಅ.17): ಹಿಂಸಾತ್ಮಕ ಪ್ರತಿಭಟನೆಯ ನಡುವೆಯೇ ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಆರಂಭವಾಗಿದೆ. ಆದರೆ ಮೊದಲ ದಿನ ಮಹಿಳೆಯರನ್ನು ತಡೆಯುವಲ್ಲಿ ಪ್ರತಿಭಟನಾಕಾರರು ಯಶಸ್ವಿಯಾಗಿದ್ದಾರೆ.

ಪ್ರತಿಭಟನೆಯಿಂದಾಗಿ ಶಬರಿಮಲೆಯ ಮಾರ್ಗದುದ್ದಕ್ಕೂ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು, ನೀಲಕ್ಕಲ್‌ ಗ್ರಾಮ ಅಕ್ಷರಶಃ ರಣಾಂಗಣವಾಗಿ ಪರಿವರ್ತನೆಗೊಂಡಿತ್ತು.

Scroll to load tweet…

ಈ ಮಧ್ಯೆ ಶಬರಿಮಲೆ ದೇಗುಲ ಮಾಸ ಪೂಜೆಗಾಗಿ ಇಂದು ದ್ವಾರಗಳನ್ನು ತೆರೆಯಲಾಗಿದೆ. ಹಲವು ಭಕ್ತರು ದೇಗುಲಕ್ಕೆ ಪ್ರವೇಶ ಪಡೆದು ಅಯ್ಯಪ್ಪನ ದರ್ಶನ ಪಡೆದಿದ್ದಾರೆ. ಆದರೆ 10 ವರ್ಷ ಕೆಳಗಿನ ಹಾಗೂ 50 ವರ್ಷ ಮೇಲ್ಪಟ್ಟ ಮಹಿಳಾ ಭಕ್ತರನ್ನು ಹೊರತುಪಡಿಸಿದರೆ ಯಾವ ಮಹಿಳೆಯೂ ದೇಗುಲ ಪ್ರವೇಶ ಪಡೆಯಲಿಲ್ಲ.

ಐದು ದಿನಗಳ ತುಲಾ ಪೂಜೆ ಮುಕ್ತಾಯದ ನಂತರ ದೇವಸ್ಥಾನ ಬಂದ್ ಆಗುವವರೆಗೂ ನೀಲಕ್ಕಲ್ ನಲ್ಲಿ ಪ್ರತಿಭಟನೆ ಮುಂದುವರೆಸುವುದಾಗಿ ಹಿಂದೂ ಐಕ್ಯ ವೇದಿಕೆ ತಿಳಿಸಿದೆ.