ಶಬರಿಮಲೆ : ಸುಪ್ರೀಂಕೋರ್ಟ್ ಮಹಿಳಾ ಪ್ರವೇಶಕ್ಕೆ ಅನುಮತಿ ನೀಡಿ ತೀರ್ಪು ನೀಡಿದ ಕೆಲ ತಿಂಗಳುಗಳ ಬಳಿಕ ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಇಬ್ಬರು ಮಹಿಳೆಯರ ಪ್ರವೇಶವಾಗಿದೆ. ಈ ಮೂಲಕ ಶಬರಿಮಲೆಯಲ್ಲಿ ಇತಿಹಾಸವೊಂದು ಸೃಷ್ಟಿಯಾದಂತಾಗಿದೆ. 

50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರು ದೇಗುಲಕ್ಕೆ ಪ್ರವೇಶಿಸಿದ್ದು, ಈ ನಿಟ್ಟಿನಲ್ಲಿ ದೇಗುಲದಲ್ಲಿ ಸ್ವಚ್ಛತಾ ಕಾರ್ಯವನ್ನು ಮಾಡಿದ್ದು, ಬಳಿಕ ದೇವಾಲಯವನ್ನು ಮುಚ್ಚಲಾಗುತ್ತದೆ ಎಂದು ಹೇಳಲಾಗಿದೆ. 

ಶಬರಿಮಲೆಯಲ್ಲಿ ಇತಿಹಾಸ: ದೇಗುಲ ಪ್ರವೇಶಿಸಿದ ಇಬ್ಬರು ಮಹಿಳೆಯರು!

ಸೆಪ್ಟೆಂಬರ್ 28 ರಂದು ಸುಪ್ರೀಂಕೋರ್ಟ್ ಮಹಿಳಾ ಪ್ರವೇಶದ ಮೇಲೆ ಇದ್ದ ನಿಷೇಧವನ್ನು ಹಿಂತೆಗೆದುಕೊಂಡಿತ್ತು.  ಈ ನಿಟ್ಟಿನಲ್ಲಿ ಹಲವು ಮಹಿಳೆಯರು ದೇಗುಲ ಪ್ರವೇಶಕ್ಕೆ ಯತ್ನಿಸಿ ಪ್ರಯತ್ನ ಸಫಲವಾಗದೇ ಹಿಂತಿರುಗಿದ್ದರು. ಆದರೆ ಬುಧವಾರ ಬಿಂದು ಮತ್ತು ಕನಕದುರ್ಗಾ ಎಂಬ ಇಬ್ಬರು ಮಹಿಳೆಯರು ಬೆಳ್ಳಂಬೆಳಗ್ಗೆ 3.45ರ ಸುಮಾರಿಗೆ ದೇಗುಲ ಪ್ರವೇಶ ಮಾಡಿದ್ದಾರೆ. 

ಯಾವುದೇ ಮಹಿಳೆಯರು ದೇಗುಲ ಪ್ರವೇಶಕ್ಕೆ ಯತ್ನಿಸಿ ಆಗಮಿಸಿದಲ್ಲಿ ಅವರಿಗೆ ಸಂಪೂರ್ಣ ಭದ್ರತೆ ನೀಡಬೇಕು ಎಂದು ಪಿಣರಾಯಿ ವಿಜಯನ್ ಸರ್ಕಾರ ಸೂಚಿಸಿತ್ತು. ಇದೀಗ ಒಬ್ಬರು ಮಹಿಳೆಯರು ಪೊಲೀಸ್ ಭದ್ರತೆಯೊಂದಿಗೆ ದೇಗುಲ ಪ್ರವೇಶ ಮಾಡಿದ್ದಾರೆ. 

ಮಹಿಳಾ ಪ್ರವೇಶದ ನಿಟ್ಟಿನಲ್ಲಿ ದೇವಾಲಯ ಆಡಳಿತ ಮಂಡಳಿ ದೇವಾಲಯ ಸ್ವಚ್ಛ ಮಾಡಿ ಮುಚ್ಚಲು ತೀರ್ಮಾನ ಮಾಡಿದೆ ಎನ್ನಲಾಗಿದೆ.