ಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ 10ರಿಂದ 50 ವರ್ಷ ವಯಸ್ಸಿನ ಮಹಿಳೆಯರ ಪ್ರವೇಶಕ್ಕೆ ಸೋಮವಾರವೂ ಕೂಡ ವಿರೋಧ ವ್ಯಕ್ತವಾಯಿತು. ಈ ನಿಟ್ಟಿನಲ್ಲಿ ಪ್ರತಿಭಟನೆ ನಡೆಸಲಾಯಿತು.ಇದೇ ವೇಳೆ ಸುದ್ದಿಯೊಂದು ಕೋಲಾಹಲಕ್ಕೂ ಕಾರಣವಾಯ್ತು.

ತಿರುವನಂತಪುರಂ: ಜಗದ್ವಿಖ್ಯಾತ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ 10ರಿಂದ 50 ವರ್ಷ ವಯಸ್ಸಿನ ಮಹಿಳೆಯರ ಪ್ರವೇಶಕ್ಕೆಸೋಮವಾರ ಕೂಡ ಬಲಪಂಥೀಯ ಕಾರ್ಯಕರ್ತರು ಹಾಗೂ ಭಕ್ತಗಣ ತಡೆ ಒಡ್ಡಿದರು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದೆ ವೇಳೆ ಅಯ್ಯಪ್ಪಸ್ವಾಮಿ ದೇಗುಲ ಬಾಗಿಲು ಮುಚ್ಚುವುದಕ್ಕೂ ಪೂರ್ವದಲ್ಲಿ ಸೋಮವಾರ ಮಹಿಳೆಯೊಬ್ಬಳು ಪುರುಷನ ವೇಷದಲ್ಲಿ ಒಳ ಪ್ರವೇಶಿಸಿದ್ದಾಳೆ ಎಂಬ ಸುದ್ದಿ ಹಬ್ಬಿದ ಕಾರಣ ಉದ್ವಿಗ್ನ ಸ್ಥಿತಿ ನಿರ್ಮಾಣ ಆಗಿತ್ತು. 

ಈ ಹಿನ್ನೆಲೆಯಲ್ಲಿ ಭಕ್ತರು ಮಾನವ ಸರಳಿ ನಿರ್ಮಿಸಿ ತಪಾಸಣೆ ನಡೆಸಿದರು. ಬಳಿಕ ಇದು ವದಂತಿ ಎಂದು ಖಚಿತವಾಯಿತು.