ಮುಂಬೈ(ಸೆ.27): ನವಿ ಮುಂಬೈಯಲ್ಲಿರುವ ಶಿವಸೇನೆಯ ಮುಖವಾಣಿ ‘ಸಾಮ್ನಾ’ ಕಚೇರಿ ಮೇಲೆ ದಾಳಿ ನಡೆದಿದೆ.

ಮರಾಠ ಸಮುದಾಯದ ‘ಮೌನ ಮೆರವಣಿಗೆ’ ಕುರಿತಂತೆ ಪ್ರಕಟವಾಗಿದ್ದ ವ್ಯಂಗ್ಯಚಿತ್ರವನ್ನು ಖಂಡಿಸಿ ಈ ದಾಳಿ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಮರಾಠ ಸಾಮಾಜಿಕ ಸಂಘಟನೆ ಪರ ‘ಸಾಂಬಾಜಿ ಬ್ರಿಗೇಡ್‌’ ದಾಳಿಯ ಹೊಣೆಹೊತ್ತಿದೆ.

ವಾಹನವೊಂದರಲ್ಲಿ ಆಗಮಿಸಿದ ಮೂವರು ಮುದ್ರಣ ಕಚೇರಿಯ ಮೇಲೆ ಕಲ್ಲೆಸೆತ ಮಾಡಿದ್ದಾರೆ. ಸಾಮ್ನಾದಲ್ಲಿ ಪ್ರಕಟಗೊಂಡ ಕಾರ್ಟೂನ್‌ನ್ನು ನಾವು ಖಂಡಿಸುತ್ತೇವೆ. ಉದ್ಧವ್‌ ಠಾಕ್ರೆ ಮತ್ತು ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಸಂಜಯ್‌ ರಾವತ್‌ ಮಹಾರಾಷ್ಟ್ರದ ಮಹಿಳೆಯರ ಕ್ಷಮೆ ಯಾಚಿಸಬೇಕು ಎಂದು ಬ್ರಿಗೇಟ್‌ ವಕ್ತಾರ ಶಿವಾನಂದ ಭಾನುಸೆ ಹೇಳಿದ್ದಾರೆ.