Asianet Suvarna News Asianet Suvarna News

ರಾಜಮೌಳಿ ಕರ್ನಾಟಕಕ್ಕೆ 6 ಲಕ್ಷ ರೂ. ದಾನ ಮಾಡಿದ್ದು ಏಕೆ ಗೊತ್ತೆ ?

ಮೂಲತಃ ರಾಯಚೂರಿನವರಾದ ಇವರು ಪ್ರಸ್ತುತ ಆಂಧ್ರದಲ್ಲಿ ನೆಲೆಗೊಂಡಿದ್ದಾರೆ. ಸಿನಿಮಾ ಯಶಸ್ಸಿನ ನಂತರ ತಮ್ಮ ಕುಟುಂಬದ ಸದಸ್ಯರೊಂದಿಗೆ ಮಂತ್ರಾಲಯಕ್ಕೂ ಭೇಟಿ ನೀಡಿದ್ದರು.

S S Rajamouli donates Rs 6 lakh for Karnataka cause
  • Facebook
  • Twitter
  • Whatsapp

ಬಾಹುಬಲಿ-2 ಯಶಸ್ಸಿನ ಸಂತೋಷದಲ್ಲಿರುವ ನಿರ್ದೇಶಕ ಎಸ್.ಎಸ್. ರಾಜಮೌಳಿ ಬಳ್ಳಾರಿಗೆ 6 ಲಕ್ಷ ರೂ. ದಾನ ಮಾಡಿದ್ದಾರೆ.

ಅಷ್ಟಕ್ಕೂ 6 ಲಕ್ಷ ರೂ. ದಾನ ಮಾಡಿದ್ದು ನಗರದಲ್ಲಿ ಸ್ವಚ್ಛತಾ ಚಟುವಟಿಕೆಗಳನ್ನು ಕೈಕೊಳ್ಳಲು. ಇತ್ತೀಚಿಗಷ್ಟೆ ತಮ್ಮ ಪತ್ನಿಯ ಜೊತೆ ನಗರದಲ್ಲಿ ಬಾಹುಬಲಿ 2 ವೀಕ್ಷಿಸಿದ್ದರು. ಪಟ್ಟಣದ ಸ್ವಚ್ಛತೆಗಾಗಿ 6 ಲಕ್ಷ ರೂ.ಗಳ ಚೆಕ್'ಅನ್ನು ಪಟ್ಟಣದ ಉಪ ಆಯುಕ್ತರಿಗೆ ಹಸ್ತಾಂತರಿಸಿದ್ದಾರೆ.

ಮೂಲತಃ ರಾಯಚೂರಿನವರಾದ ಇವರು ಪ್ರಸ್ತುತ ಆಂಧ್ರದಲ್ಲಿ ನೆಲೆಗೊಂಡಿದ್ದಾರೆ. ಸಿನಿಮಾ ಯಶಸ್ಸಿನ ನಂತರ ತಮ್ಮ ಕುಟುಂಬದ ಸದಸ್ಯರೊಂದಿಗೆ ಮಂತ್ರಾಲಯಕ್ಕೂ ಭೇಟಿ ನೀಡಿದ್ದರು.

Follow Us:
Download App:
  • android
  • ios