ಒಂದು ಕಾಲದಲ್ಲಿ ಬಿಜೆಪಿಗೆ ಹೋದರೆ ಯಾಕೆ ಹೋದೆ ಅಂತಾ ಕೇಳೋರು ಇವತ್ತು ಬಿಜೆಪಿ ಸೇರೋದಕ್ಕೆ ನೂಕುನುಗ್ಗಲು ಉಂಟು ಮಾಡುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಎಸ್.ಸಿ. ಮೋರ್ಚಾ ಅಧ್ಯಕ್ಷ ಡಿ.ಎಸ್. ವೀರಯ್ಯ ಹೇಳಿದ್ದಾರೆ.

ಬೆಂಗಳೂರು (ಅ.18): ಒಂದು ಕಾಲದಲ್ಲಿ ಬಿಜೆಪಿಗೆ ಹೋದರೆ ಯಾಕೆ ಹೋದೆ ಅಂತಾ ಕೇಳೋರು ಇವತ್ತು ಬಿಜೆಪಿ ಸೇರೋದಕ್ಕೆ ನೂಕುನುಗ್ಗಲು ಉಂಟು ಮಾಡುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಎಸ್.ಸಿ. ಮೋರ್ಚಾ ಅಧ್ಯಕ್ಷ ಡಿ.ಎಸ್. ವೀರಯ್ಯ ಹೇಳಿದ್ದಾರೆ.

ಇಲ್ಲಿ ನಡೆಯುತ್ತಿರುವ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದ ವೀರಯ್ಯ, ಈಗ ಬಿಜೆಪಿ ವರ್ಚಸ್ಸು ಜಾಸ್ತಿಯಾಗಿದೆ. ಇದು ನರೇಂದ್ರ ಮೋದಿಯವರು ತಂದಿರುವ ಬದಲಾವಣೆ. ನಮ್ಮ ನಾಯಕರು ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ ಕಾಂಗ್ರೆಸ್ ವಿರುದ್ದ ಸೇಡು ತೀರಿಸಿಕೊಳ್ಳಬೇಕು. ಕಾಂಗ್ರೆಸ್ ನ್ನು ನಿರ್ನಾಮ ಮಾಡಬೇಕು. ಅದು ಅಂಬೇಡ್ಕರ್ ಅವರ ಅನುಯಾಯಿಗಳೆಲ್ಲರ ಕರ್ತವ್ಯ ಎಂದು ವೀರಯ್ಯ ಅಭಿಪ್ರಾಯಪಟ್ಟಿದ್ದಾರೆ.

ಹಿಂದುಳಿದ ಜಾತಿಯವನೊಬ್ಬ ಈ ದೇಶದ ಪ್ರಧಾನಿಯಾಗಲು ಕಾರಣವಾಗಿದ್ದು ಅಂಬೇಡ್ಕರ್ ಬರೆದ ಸಂವಿಧಾನದಿಂದ ಎಂಬ ಮಾತನ್ನ ಮೋದಿ ಹೇಳಿದ್ದಾರೆ. ಇಂತಹ ಮಾತನ್ನ ಈ ದೇಶದ ಮತ್ಯಾವ ಪ್ರಧಾನಿಯೂ ಹೇಳಲಿಲ್ಲ. ದೇವೇಗೌಡರು ಪ್ರಧಾನಿಯಾದಾಗಲೂ ಇಂತಹ ಮಾತು ಅವರ ಬಾಯಿಂದ ಬರಲಿಲ್ಲ ಎಂದು ಮೋದಿಯವರ ಗುಣಗಾನ ಮಾಡಿದ್ದಾರೆ.