ಅಮೆರಿಕಾದ ಅಕ್ರಮವನ್ನು ನಾವು ಖಂಡಿಸುತ್ತೇವೆ. ಅದರ ಈ ಕ್ರಮವು ಪ್ರಾದೇಶಿಕ ಹಾಗೂ ಅಂತರಾಷ್ಟ್ರೀಯ ಸ್ಥಿರತೆಯ ಮೇಲೆ ಗಂಭೀರ ಪರಿಣಾಮಗಳನ್ನು ಬೀರುವ ಸಾಧ್ಯತೆಗಳಿವೆ, ಎಂದು ರಷ್ಯಾದ ವಿಶ್ವಸಂಸ್ಥೆ ಪ್ರತಿನಿಧಿ ವ್ಲಾದಿಮರ್ ಸಫ್ರೊಂಕೋವ್ ಭದರ್ತಾ ಮಂಡಳಿಯ ಸಭೆಯಲ್ಲಿ ಹೇಳಿದ್ದಾರೆ.

ವಿಶ್ವಸಂಸ್ಥೆ (ಏ.08): ಸಿರಿಯನ್ ವಾಯುನೆಲೆಯ ಮೇಲೆ ಕ್ಷಿಪಣಿ ದಾಳಿ ನಡೆಸಿರುವ ಅಮೆರಿಕಾ ಕ್ರಮವನ್ನು ಖಂಡಿಸಿರುವ ರಷ್ಯಾ, ಗಂಭೀರ ಪರಿಣಾಮಗಳನ್ನು ಎದುರಿಸಬೇಕಾದಿತು ಎಂದು ಅಮೆರಿಕಾಗೆ ಎಚ್ಚರಿಕೆ ನೀಡಿದೆ.

ಅಮೆರಿಕಾದ ಅಕ್ರಮವನ್ನು ನಾವು ಖಂಡಿಸುತ್ತೇವೆ. ಅದರ ಈ ಕ್ರಮವು ಪ್ರಾದೇಶಿಕ ಹಾಗೂ ಅಂತರಾಷ್ಟ್ರೀಯ ಸ್ಥಿರತೆಯ ಮೇಲೆ ಗಂಭೀರ ಪರಿಣಾಮಗಳನ್ನು ಬೀರುವ ಸಾಧ್ಯತೆಗಳಿವೆ, ಎಂದು ರಷ್ಯಾದ ವಿಶ್ವಸಂಸ್ಥೆ ಪ್ರತಿನಿಧಿ ವ್ಲಾದಿಮರ್ ಸಫ್ರೊಂಕೋವ್ ಭದರ್ತಾ ಮಂಡಳಿಯ ಸಭೆಯಲ್ಲಿ ಹೇಳಿದ್ದಾರೆ.

ಕಳೆದ ಆರು ವರ್ಷಗಳಿಂದ ಸಿರಿಯಾದಲ್ಲಿ ನಾಗರಿಕ ದಂಗೆ ನಡೆಯುತ್ತಿದ್ದು, ಬಂಡುಕೋರರ ವಿರುದ್ಧ ಸಿರಿಯಾವು ರಾಸಾಯನಿಕ ಅಸ್ತ್ರಗಳನ್ನು ಪ್ರಯೋಗಿಸಿದೆ ಎಂದು ಆರೋಪಿಸಿ ಅಮೆರಿಕಾವು ಸಿರಿಯಾ ವಾಯುನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿತ್ತು.

ಅಮೆರಿಕಾ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಟ್ರಂಪ್ ವಿದೇಶಾಂಗ ವ್ಯವಹಾರಗಳಲ್ಲಿ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ. ಇರಾನ್ ಹಾಗೂ ರಷ್ಯಾಗಳು ಸಿರಿಯಾ ಅಧ್ಯಕ್ಷ ಅಸದ್ ಬೆಂಬಲಕ್ಕೆ ನಿಂತಿವೆ.

ಖಾನ್ ಶೇಖೌನ್ ಎಂಬ ಪಟ್ಟಣದಲ್ಲಿ ಕಳೆದ ವಾರ ಸಿರಿಯಾ ಸೇನೆಯು ಪ್ರಯೋಗಿಸಿದೆನ್ನಲಾದ ವಿಷಾನಿಲ ದಾಳಿಗೆ ಮಕ್ಕಳು ಸೇರಿದಂತೆ ಸುಮಾರು 70 ಮಂದಿ ಪ್ರಾಣತೆತ್ತಿದ್ದಾರೆ. ಆದರೆ ಸಿರಿಯಾ ಸರ್ಕಾರವು ವಿಷಾನಿಲ ಬಳಕೆಯನ್ನು ಅಲ್ಲಗಳೆದಿದೆ.