ಪ್ರತೀ ಸೆಕೆಂಡ್‍ಗೆ 7 ಕಿ.ಮೀ ಕ್ರಮಿಸುವ ಸಾಮರ್ಥ್ಯವನ್ನು ಹೊಂದಿರು ಈ ಸ್ಯಾಟನ್-2 ಕ್ಷಿಪಣಿ, 10 ಸಾವಿರ ಕಿ.ಮೀ ದೂರದವರೆಗಿನ ಶತ್ರುಗಳ ನೆಲೆಯನ್ನು ಧ್ವಂಸಗೊಳಿಸಲಿದೆಯಂತೆ. ತಾಂತ್ರಿಕವಾಗಿ ಸಾಕಷ್ಟು ಅತ್ಯಾಧುನಿಕವಾಗಿರುವ ಈ ಪ್ರಬಲ ಕ್ಷಿಪಣಿ ಶತ್ರುಪಾಳಯದ ಯಾವುದೇ ರೀತಿ ರಾಡಾರ್ ಗಳಿಗೆ ಸಿಗದೇ ತನ್ನ ಗುರಿಯನ್ನು ಕ್ಷಣ ಮಾತ್ರದಲ್ಲಿ ಧ್ವಂಸಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ಕ್ಷಿಪಣಿಯಲ್ಲಿರುವ ರಹಸ್ಯ ತಂತ್ರಜ್ಞಾನ ಬಳಸಿಕೊಂಡು ಈ ಕಈ ಕಾರ್ಯಾಚರಣೆ ನಡೆಸಲಿದೆ. ಈ ಕ್ಷಿಪಣಿ ಸ್ಫೋಟಿಸಿದರೆ ಅಮೆರಿಕ ಎರಡನೇ ದೊಡ್ಡ ರಾಜ್ಯವಾಗಿರುವ ಟೆಕ್ಸಾಸ್ ಅಥವಾ ಇಡೀ ಫ್ರಾನ್ಸ್ ದೇಶವೇ ಸಂಪೂರ್ಣ ನಾಶವಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ರಷ್ಯಾ(ಅ.27):ಮೂರನೇ ಮಹಾಯುದ್ಧಕ್ಕೆ ರಷ್ಯಾ ಸಿದ್ಧತೆ ನಡೆಸಿದೆ ಅನ್ನೋ ಗುಸುಗುಸು ನಡುವೆಯೇ ನಡುವೆಯೇ ರಷ್ಯನ್ ಆರ್ಮಿ ಅತ್ಯಾಧುನಿಕ ಕ್ಷಿಪಣಿಯೊಂದರ ಪರೀಕ್ಷೆ ಮಾಡಿದೆ.ರಷ್ಯಾ ಬಳಿಯ ಇರುವ ಈ ಒಂದು ಕ್ಷಿಪಣಿ ಇಡೀ ಫ್ರಾನ್ಸ್ ದೇಶವನ್ನೇ ನಾಮಾವಶೇಷ ಮಾಡಬಲ್ಲ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ. ರಷ್ಯಾದ ಈ ನಡೆ ವಿಶ್ವದ ದೊಡ್ಡಣ್ಣ ಅಮೆರಿಕದ ನಿದ್ದೆಗೆಡಿಸಿದೆ.
ಥರ್ಮೋನ್ಯೂಕ್ಲಿಯರ್ ಖಂಡಾಂತರ ಕ್ಷಿಪಣಿಯನ್ನು ರಷ್ಯಾ ಅಭಿವೃದ್ಧಿ ಪಡಿಸಿದ್ದು, ಈ ನೂತನ ಕ್ಷಿಪಣಿಗೆ ರಷ್ಯಾ ಸೇನೆ ಸತಾನ್-2 ಅಂತ ಹೆಸರಿಟ್ಟಿದೆ. ಅಮೆರಿಕ ಸೇರಿದಂತೆ ಪ್ರಪಂಚದ ಯಾವುದೇ ದೇಶದ ಪ್ರಬಲ ಕ್ಷಿಪಣಿಗಳಿಗಿಂತಲೂ ಇದು ಪ್ರಬಲ ಕ್ಷಿಪಣಿ ಎಂದು ಹೇಳಲಾಗುತ್ತಿದ್ದು, ಒಂದೇ ಬಾರಿಗೆ 10 ಪರಮಾಣು ಬಾಂಬ್ ಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯವನ್ನು ಹೊಂದಿದೆ.
ಪ್ರತೀ ಸೆಕೆಂಡ್ಗೆ 7 ಕಿ.ಮೀ ಕ್ರಮಿಸುವ ಸಾಮರ್ಥ್ಯವನ್ನು ಹೊಂದಿರು ಈ ಸ್ಯಾಟನ್-2 ಕ್ಷಿಪಣಿ, 10 ಸಾವಿರ ಕಿ.ಮೀ ದೂರದವರೆಗಿನ ಶತ್ರುಗಳ ನೆಲೆಯನ್ನು ಧ್ವಂಸಗೊಳಿಸಲಿದೆಯಂತೆ. ತಾಂತ್ರಿಕವಾಗಿ ಸಾಕಷ್ಟು ಅತ್ಯಾಧುನಿಕವಾಗಿರುವ ಈ ಪ್ರಬಲ ಕ್ಷಿಪಣಿ ಶತ್ರುಪಾಳಯದ ಯಾವುದೇ ರೀತಿ ರಾಡಾರ್ ಗಳಿಗೆ ಸಿಗದೇ ತನ್ನ ಗುರಿಯನ್ನು ಕ್ಷಣ ಮಾತ್ರದಲ್ಲಿ ಧ್ವಂಸಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ಕ್ಷಿಪಣಿಯಲ್ಲಿರುವ ರಹಸ್ಯ ತಂತ್ರಜ್ಞಾನ ಬಳಸಿಕೊಂಡು ಈ ಕಈ ಕಾರ್ಯಾಚರಣೆ ನಡೆಸಲಿದೆ. ಈ ಕ್ಷಿಪಣಿ ಸ್ಫೋಟಿಸಿದರೆ ಅಮೆರಿಕ ಎರಡನೇ ದೊಡ್ಡ ರಾಜ್ಯವಾಗಿರುವ ಟೆಕ್ಸಾಸ್ ಅಥವಾ ಇಡೀ ಫ್ರಾನ್ಸ್ ದೇಶವೇ ಸಂಪೂರ್ಣ ನಾಶವಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
