ರಷ್ಯಾ ವಿದೇಶಾಂಗ ಸಚಿವ  ಕುರಿತು ಅಧ್ಯಕ್ಷ ವ್ಲಾದಿಮರ್ ಪುತಿನ್’ಗೆ ಈ ಕುರಿತು ಪ್ರಸ್ತಾಪವನ್ನು ಸಲ್ಲಿಸಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಮಾಸ್ಕೋ (ಡಿ.30): ಅಮೆರಿಕಾ ಹಾಗೂ ರಷ್ಯಾ ನಡುವಿನ ರಾಜತಾಂತ್ರಿಕ ಸಮರ ಹೊಸ ತಿರುವು ಪಡೆದುಕೊಂಡಿದೆ.

ಗುಪ್ತಚರರೆನ್ನಲಾದ ರಷ್ಯಾದ 35 ಮಂದಿಯನ್ನು ಗುರುವಾರ ಅಮೆರಿಕಾ ಹೊರದಬ್ಬಿದ ಹಿನ್ನೆಲೆಯಲ್ಲಿ, ರಷ್ಯಾವು ಕೂಡಾ ಅಮೆರಿಕಾದ 35 ರಾಜತಾಂತ್ರಿಕರನ್ನು ವಾಪಾಸು ಕಳುಹಿಸಲು ನಿರ್ಧರಿಸಿದೆ.

ರಷ್ಯಾ ವಿದೇಶಾಂಗ ಸಚಿವ ಕುರಿತು ಅಧ್ಯಕ್ಷ ವ್ಲಾದಿಮರ್ ಪುತಿನ್’ಗೆ ಈ ಕುರಿತು ಪ್ರಸ್ತಾಪವನ್ನು ಸಲ್ಲಿಸಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಗುಪ್ತಚರರೆನ್ನಲಾದ 35 ಮಂದಿಯನ್ನು ಹೊರದೂಡುವ ಹಾಗೂ ಅಮೆರಿಕಾ ಚುನಾವಣೆಗಳನ್ನು ಹ್ಯಾಕ್ ಮಾಡಿದ್ದಾರೆ ಎಂಬ ಆರೋಪದಲ್ಲಿ ರಷ್ಯಾದ 2 ಗುಪ್ತಚರ ಸಂಸ್ಥೆಗಳಿಗೆ ನಿಷೇಧ ಹೇರುವ ನಿರ್ಧಾರವನ್ನು ಒಬಾಮ ನಿನ್ನೆ ಕೈಗೊಂಡಿದ್ದರು.