ಹುಬ್ಬಳ್ಳಿ, ಗದಗನಲ್ಲಿ ನಿಫಾ ಭಯ: ಕಟ್ಟೆಚ್ಚರ ಘೋಷಣೆ..!

Rumors spread of Nipah virus in Hubli
Highlights

ರಾಜ್ಯದ ವಿವಿಧ ನಗರಗಳಲ್ಲಿ ಮಾರಕ ನಿಫಾ ಹರಡಿರುವ ಗಾಳಿಸುದ್ದಿ ಹರಿದಾಡುತ್ತಿವೆ. ಇತ್ತಿಚೀಗಷ್ಟೇ ಸಾಗರದಲ್ಲಿ ನಿಫಾ ವೈರಸ್ ಹರಡಿದ ಶಂಕೆ ಹಿನ್ನಲೆಯಲ್ಲಿ ರಕ್ತದ ಮಾದರಿಯನ್ನು ಮುಂಬೈಗೆ ಕಳುಹಿಸಲಾಗಿತ್ತು. ಆದರೆ ರಕ್ತದ ಮಾದರಿಯಲ್ಲಿ ನಿಫಾ ವೈರಸ್ ಪತ್ತೆಯಾಗಿಲ್ಲ ಎಂದು ಪ್ರಯೋಗಾಲಯ ಸ್ಪಷ್ಟಪಡಿಸಿದೆ.

ಹುಬ್ಬಳ್ಳಿ (ಮೇ. 25): ರಾಜ್ಯದ ವಿವಿಧ ನಗರಗಳಲ್ಲಿ ಮಾರಕ ನಿಫಾ ಹರಡಿರುವ ಗಾಳಿಸುದ್ದಿ ಹರಿದಾಡುತ್ತಿವೆ. ಇತ್ತಿಚೀಗಷ್ಟೇ ಸಾಗರದಲ್ಲಿ ನಿಫಾ ವೈರಸ್ ಹರಡಿದ ಶಂಕೆ ಹಿನ್ನಲೆಯಲ್ಲಿ ರಕ್ತದ ಮಾದರಿಯನ್ನು ಮುಂಬೈಗೆ ಕಳುಹಿಸಲಾಗಿತ್ತು. ಆದರೆ ರಕ್ತದ ಮಾದರಿಯಲ್ಲಿ ನಿಫಾ ವೈರಸ್ ಪತ್ತೆಯಾಗಿಲ್ಲ ಎಂದು ಪ್ರಯೋಗಾಲಯ ಸ್ಪಷ್ಟಪಡಿಸಿದೆ.

ಆದರೆ ಇದೀಗ ಹುಬ್ಬಳ್ಳಿ ಮತ್ತು ಗದಗ ಜಿಲ್ಲೆಗಳಲ್ಲಿ ನಿಫಾ ವೈರಸ್ ಹರಡಿದೆ ಎಂಬ ಗುಲ್ಲು ಎದ್ದಿದೆ. ಗದಗ ಜಿಲ್ಲೆಯಲ್ಲಿ ಮಾರಕ ಶಂಕಿತ ನಿಫಾ ವೈರಸ್ ಪತ್ತೆಯಾಗಿರುವ ಸುದ್ದಿ ಹರಡಿದೆ. ಕಿಮ್ಸ್ ಹಾಗೂ  ಜಿಲ್ಲಾ ಆರೋಗ್ಯ ಇಲಾಖೆ ಕಟ್ಟೆಚ್ಚರ ಕೈಗೊಂಡಿದೆ.  ನಗರದ ಕಿಮ್ಸ್ ಆಸ್ಪತ್ರೆಯ ಹಿಂದಿನ ಗೇಟ್ ನ ಮರದಲ್ಲಿ ಸಾವಿರಾರು ಬಾವಲಿಗಳು ವಾಸವಾಗಿವೆ. ಹೀಗಾಗಿ ಕಿಮ್ಸ್ ‌ ಬಳಿಯ ಬಾವುಲಿ ಹಾಗೂ ಹಂದಿಗಳ  ತೆರವಿಗೆ ಕಿಮ್ಸ್ ನಿರ್ದೇಶ ದತ್ತಾತ್ರೆಯ ಬಂಟ್ ಮಹಾನಗರ ಪಾಲಿಕೆಗೆ ಪತ್ರ ಬರೆದಿದ್ದಾರೆ. 

ನಿಫಾ ವೈರಸ್‌ನಿಂದ ಹರಡುವ ರೋಗವನ್ನು ಗಂಭೀರವಾಗಿ ಪರಿಗಣಿಸಿರುವ ಕಿಮ್ಸ್ ನಿರ್ದೇಶಕ ಅದರಿಂದ ಆಗುವ ಅಪಾಯವನ್ನು ಪಾಲಿಕೆಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. 
ಕಿಮ್ಸ್ ಆಸ್ಪತ್ರೆಗೆ ದಾಖಲಾಗುವ ಶಂಕಿ ನಿಫಾ ರೋಗಿಗಳ ಚಿಕಿತ್ಸೆಗೆ ಪ್ರತ್ಯೇಕ ಘಟಕ ತೆರಯಲಾಗಿದೆ. ಚಿಕಿತ್ಸೆಗೆ 40 ಹಾಸಿಗೆಯುಳ್ಳ ಪ್ರತ್ಯೇಕ ಚಿಕಿತ್ಸಾ ಘಟಕ ಸ್ಥಾಪನೆ ಮಾಡಲಾಗಿದೆ. ಆಸ್ಪತ್ರೆಯ ಸಿಬ್ಬಂದಿಗೆ ನಿಫಾ ವೈರಸ್ ರೋಗಿಗಳ ಲಕ್ಷಣಗಳ ಬಗ್ಗೆ ಸಂಪೂರ್ಣ ತರಬೇತಿ ನೀಡಲಾಗಿದೆ.

ಶಂಕಿತ ನಿಫಾ ವೈರಸ್ ರೋಗಿಗಳನ್ನ ನಿಷ್ಕಾಳಜಿ ವಹಿಸದಂತೆ ತಾಕೀತು ಮಾಡಲಾಗಿದೆ. ನಿಫಾ ವೈರಸ್ ಹರಡುವಿಕೆ ಮತ್ತು ಅದರ‌ ಗುಣಲಕ್ಷಣಗಳ ಬಗ್ಗೆ ಕಿಮ್ಸ್ ಬರುವವರಿಗೆ ಜಾಗೃತಿ ನೀಡಲಾಗುತ್ತಿದೆ.  ಕಿಮ್ಸ್ ಆಸ್ಪತ್ರೆಯ ಹಿಂಬದಿಯ ಗೇಟ್ ಬಳಿ ಸಾವಿರಾರು ಬಾವುಲಿಗಳು ವಾಸವಾಗಿರುವದರಿಂದ ಈ ಭಾಗದಲ್ಲಿ ಸಂಪೂರ್ಣ ಸಂಚಾರ ಮತ್ತು ಸಾರ್ವಜನಿಕ ಓಡಾಟ ನಿಷೇಧ ಹೇರಲು ಕಿಮ್ಸ್ ನಿರ್ಧರಿಸಿದೆ.

loader